ಜಿಲ್ಲೆ

ಡಾ.ವೆಂಕಟರಮಣ ಹೆಗಡೆ ಮೈಸೂರಿನಲ್ಲಿ ಲಭ್ಯ

ಮೈಸೂರು: ‘ವಿಜಯವಾಣಿ’ ಧನ್ವಂತರಿ ಅಂಕಣಕಾರ, ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ ಡಾ.ವೆಂಕಟರಮಣ ಹೆಗಡೆ ಶಿರಸಿ ಅವರು ಏ.7ರಂದು ಭಾನುವಾರ ಮೈಸೂರಿನಲ್ಲಿ ಲಭ್ಯವಿದ್ದಾರೆ.
ಅಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಜೋಸ್ ಅಲುಕ್ಕಾಸ್(ಲಿಡೋ ಚಿತ್ರಮಂದಿರ) ಬಳಿ ಇರುವ ಹೋಟೆಲ್ ರೂಪದಲ್ಲಿ ಉಚಿತ ಸಂದರ್ಶನ ನಡೆಸಲಿದ್ದಾರೆ.
ಡಾ.ವೆಂಕಟರಮಣ ಹೆಗಡೆ ಬರೆದಿರುವ ಮನೆಯಲ್ಲೇ ಪರಿಹಾರ ಆಹಾರ ಆರೋಗ್ಯ ಪವರ್ ಡಯಟ್ ಪುಸ್ತಕಗಳೂ ಹಾಗೂ ಅಲ್ಫಾ ನ್ಯಾಚುರಲ್ ಆಹಾರ ಔಷಧಗಳೂ ಶಿಬಿರದಲ್ಲಿ ಲಭ್ಯವಿದೆ. ಭೇಟಿಗೆ ಬರುವವರು ಸಮಯ ಖಚಿತಪಡಿಸಿಕೊಳ್ಳಲು ಮೊಬೈಲ್ ಸಂಖ್ಯೆ 8970822508 ಅಥವಾ 8073320479 ಅನ್ನು ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.