ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆ ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾಗಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ ಆಗಿದ್ದಾರೆ.
ಉಡುಪಿ ಖಾಸಗಿ ಹೋಟೆಲ್ನಲ್ಲಿ ನಡೆದ ಸಂಸ್ಥೆಯ 60ನೇ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಮಾರ್ಗದರ್ಶಕರಾಗಿ ಡಾ.ಎಚ್.ಶಾಂತರಾಮ್, ಗೌರವಾಧ್ಯಕ್ಷರಾಗಿ ಡಾ. ಎಚ್.ಎಸ್. ಬಲ್ಲಾಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ ಚಂದ್ರ ಕುತ್ಪಾಡಿ, ಸಹ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ, ವಿವೇಕಾನಂದ ಎನ್., ಕೋಶಾಧಿಕಾರಿಯಾಗಿ ಭೋಜ ಯು. ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ, ಪೂರ್ಣಿಮಾ ಸುರೇಶ, ವಿದ್ಯಾವಂತ ಆಚಾರ್ಯ, ಎಚ್. ಜಯಪ್ರಕಾಶ್ ಕೆದ್ಲಾಯ, ಗಿರೀಶ ತಂತ್ರಿ, ಡಾ. ವಿಷ್ಣುಮೂರ್ತಿ ಪ್ರಭು, ಆನಂದ ಮೇಲಂಟ, ಅಮಿತಾಂಜಲಿ ಕಿರಣ, ಕೆ.ರವೀಂದ್ರ ಆಚಾರ್ಯ, ರವೀಂದ್ರ ಶೆಟ್ಟಿ ಕಡೆಕಾರು, ಹರೀಶ ಜೆ. ಕಲ್ಮಾಡಿ, ತಲ್ಲೂರು ಶಿವಪ್ರಸಾದ ಶೆಟ್ಟಿ ಹಾಗೂ ಕಾರ್ತಿಕ ಪ್ರಭು ಆಯ್ಕೆಯಾದರು.
ಸಲಹಾ ಸಮಿತಿ ಗೌರವ ಸದಸ್ಯರಾಗಿ ಯು. ದಾಮೋದರ, ಕೆ.ಗೋಪಾಲ್, ಕೆ. ಲಕ್ಷ್ಮೀನಾರಾಯಣ ಭಟ್, ಭುವನ ಪ್ರಸಾದ ಹೆಗ್ಡೆ, ಯು.ವಿಶ್ವನಾಥ ಶೆಣೈ, ಕುತ್ಪಾಡಿ ವಿಠಲ ಗಾಣಿಗ ಹಾಗೂ ಬೆಳಗೋಡು ರಮೇಶ ಭಟ್ ಆಯ್ಕೆಯಾದರು.
ವಿಶೇಷ ಆಹ್ವಾನಿತರಾಗಿ ಡಾ. ಮಾಧವಿ ಭಂಡಾರಿ, ರವಿರಾಜ ನಾಯಕ, ರಂಜನ್ ಕಲ್ಕೂರ, ಸುಭಾಶ ಕೊರಂಗ್ರಪಾಡಿ, ಸುಬ್ರಹ್ಮಣ್ಯ ಸೇರಿಗಾರ್, ರೇವತಿ ನಾಡಗೀರ, ತುಮರಿ ಪ್ರಭಾಕರ ಜಿ.ಪಿ., ಜಯಕರ ಮಣಿಪಾಲ, ಸೂರ್ಯಪ್ರಕಾಶ, ಸಂದೀಪಕುಮಾರ್ ಎಂ., ಶ್ರೀನಿವಾಸ ಆಚಾರ್ಯ, ಎಚ್. ನರಸಿಂಹಮೂರ್ತಿ ರಾವ್, ಡಾ. ಪಿ.ಬಿ. ಪ್ರಸನ್ನ, ಆದ್ಯತಾ ಭಟ್, ವಿದ್ಯಾ ಶಾಮಸುಂದರ, ರಾಘವ ಬಿ. ಪ್ರೀತಮ್ ನಾಯಕ, ಅಕ್ಷಯ ಭಟ್, ವಿಶ್ವನಾಥ ಕಟ್ಟೆಗುಡ್ಡೆ ಆಯ್ಕೆಯಾದರು.