ಜಿಲ್ಲೆ

ವ್ಯವಸ್ಥಾಪನಾ ಸಮಿತಿಗೆ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷ

ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಸುರೇಶ್ ಪುತ್ತೂರಾಯ ಪುನರಾಯ್ಕೆಯಾಗಿದ್ದಾರೆ.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಉಪಸ್ಥಿತಿಯಲ್ಲಿ ಬುಧವಾರ ಆಯೋಜಿಸಿದ ಸಭೆಯಲ್ಲಿ ಆಯ್ಕೆ ನಡೆಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಉದ್ಯಮಿಗಳಾದ ಶಿವರಾಮ ಆಳ್ವ ಬಳ್ಳಮಜಲು, ಭೀಮಯ್ಯ ಭಟ್, ನೂತನವಾಗಿ ನೇಮಕಗೊಂಡ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್, ರವಿಚಂದ್ರ ಆಚಾರ್ಯ ಸಂಪ್ಯ, ಆದರ್ಶ ಮೊಟ್ಟೆತ್ತಡ್ಕ, ಪ್ರೇಮ ಶಿವಪ್ಪ ಸಪಲ್ಯ, ಮೀನಾಕ್ಷಿ ಸೇಶಪ್ಪ ಗೌಡ ನೀರ್ಕಜೆ, ಅರ್ಚಕ ಮೋಹನ ರಾವ್, ಮಾಜಿ ಸದಸ್ಯೆ ಶಶಿಕಲಾ ನಿರಂಜನ ಶೆಟ್ಟಿ ಉಪಸ್ಥಿತರಿದ್ದರು.