ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅಂತ್ಯಸಂಸ್ಕಾರ ಇಳಿಸಂಜೆ ಹೊತ್ತಲ್ಲಿ ನೆರವೇರಿದ್ದು, ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಬೆಂಗಳೂರಿನ ಅಬ್ಬಿಗೆರೆಯಲ್ಲಿರುವ ಅವರು ಫಾರ್ಮ್ಹೌಸ್ನಲ್ಲಿ ಈ ಅಂತ್ಯಸಂಸ್ಕಾರ ನೆರವೇರಿತು.
ರುದ್ರಮುನಿ ಶಿವಾಚಾರ್ಯ ಶ್ರೀಗಳ ಉಸ್ತುವಾರಿಯಲ್ಲಿ ವೀರಶೈವ ಲಿಂಗಾಯತ ಧರ್ಮದಂತೆ ಅಂತ್ಯಕ್ರಿಯೆ ನೆರವೇರಿತು. ಸೌಂದರ್ಯ ಅವರ ತಂದೆ ಹುಬ್ಬಳ್ಳಿಯಿಂದ ಜೀರೋ ಟ್ರಾಫಿಕ್ನಲ್ಲಿ ಅಂತ್ಯಸಂಸ್ಕಾರಕ್ಕೆ ಆಗಮಿಸುತ್ತಿದ್ದಂತೆ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಿತು.
ಪತಿ ಡಾ.ನೀರಜ್, ತಂದೆ ವಿರೂಪಾಕ್ಷಪ್ಪ, ಮಾಜಿ ಸಿಎಂ ಬಿಎಸ್ವೈ ಯಡಿಯೂರಪ್ಪ ಕುಟುಂಬಸ್ಥರು ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂತ್ಯಸಂಸ್ಕಾರದ ವೇಳೆ ಕುಟುಂಬಸ್ಥರ ದುಃಖ ಮತ್ತೊಮ್ಮೆ ಕಟ್ಟೆಯೊಡೆದಿತ್ತು.