ಬೆಳಗಾವಿ: ಬಿಜೆಪಿ ಸಂಸದೆ ಕಂಗನಾ ರಣಾವತ್ ಕುರಿತು ಶಿರೋಮಣಿ ಅಕಾಲಿದಳದ ನಾಯಕ, ಮಾಜಿ ಸಂಸದ ಸಿಮ್ರಂಜಿತ್‌ಸಿಂಗ್ ಮಾನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಖಂಡನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಮಹಿಳೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದನ ಹೇಳಿಕೆ ಸ್ವೀಕಾರ್ಹವಲ್ಲ. ಅತ್ಯಾಚಾರದಂತ ಸೂಕ್ಷ್ಮ ವಿಷಯಗಳ ಕುರಿತು ಮಾತನಾಡುವ ಇವರ ಮಾನಸಿಕ ಸ್ಥಿತಿ ನಾಚಿಕೆಗೇಡಿನ ಸಂಗತಿ. ಇವರ ಹೇಳಿಕೆಯನ್ನು ಮಹಿಳಾ ಮೋರ್ಚಾ ಖಂಡಿಸುತ್ತದೆ ಎಂದರು. ರಾಜಕೀಯ ಭಾಷಣ ಮಿತಿ ಮೀರಬಾರದು. ಮಹಿಳೆಯರ ಕುರಿತು ಮಾತನಾಡುವಾಗ ಎಚ್ಚರಿಕೆ ಇರಬೇಕು. ಅತ್ಯಾಚಾರ ಇವತ್ತಿನ ಸಮಾಜದಲ್ಲಿ ಒಂದು ಪಿಡುಗು. ಹೆಣ್ಣುಮಕ್ಕಳು ಅದರಿಂದ ಸಾಕಷ್ಟು ನೋವು ಅನುಭವಿಸುತ್ತಾರೆ. ಕೂಡಲೇ ಮಾನ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.