ಮಂಗಳೂರು : ಪ್ರತ್ಯೇಕತೆ ವಿರುದ್ಧ ಹೋರಾಡಿದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನಕ್ಕೆ ಕಾಶ್ಮೀರದಲ್ಲಿದ್ದ 370 ನೇ ವಿಧಿ ತೆರವಿನ ಮೂಲಕ ನಿಜವಾದ ಶೃದ್ಧಾಂಜಲಿ ದೊರೆತಿದೆ ಎಂದು ಬಿಜೆಪಿ ಮುಖಂಡ ರವಿಶಂಕರ ಮಿಜಾರ್ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಸ್ವತಂತ್ರ ದೇಶದೊಳಗೆ ಮತ್ತೊಂದು ದೇಶವಾಗಿ ಕಾಶ್ಮೀರದ ರಚನೆ ಹಾಗೂ ವಿಶೇಷ ಸ್ಥಾನಮಾನದ ಹೆಸರಲ್ಲಿ 370 ನೇ ವಿಧಿಯ ಅನ್ವಯ ಈ ದೇಶವನ್ನು ಪ್ರತ್ಯೇಕತೆಯ ಬೇಗುದಿಗೆ ದೂಡಿದ ನೆಹರು ಸರ್ಕಾರದ ದೇಶದಾದ್ಯಂತ ಹೋರಾಟ ನಡೆಸಿದ ಡಾ.ಮುಖರ್ಜಿ ಅವರನ್ನು ಕಾಶ್ಮೀರದಲ್ಲಿ ಬಂಧಿಸಲಾಯಿತು. ಜೈಲಿನಲ್ಲೇ ಅವರು ನಮ್ಮನ್ನಗಲಿದರು. ಆದರೆ ಅವರ ಈ ಬಲಿದಾನವು ವ್ಯರ್ಥ ಆಗಲಿಲ್ಲ. ಮೋದಿ ಸರ್ಕಾರ ಕಾಶ್ಮೀರವನ್ನು 370 ನೇ ವಿಧಿಯಿಂದ ಮುಕ್ತಗೊಳಿಸಿದೆ ಎಂದರು.
ದ.ಕ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ
ತಿಲಕ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.