ಉಡುಪಿ: ಆರ್ಯಭಟ ಪ್ರಶಸ್ತಿ ಪುರಸ್ಕೃತೆ, ಮಧುಮೇಹ ತಜ್ಞೆ, ಬಿಗ್ ಮೆಡಿಕಲ್ ಸೆಂಟರ್ನ ಡಾ. ಶ್ರುತಿ ಬಲ್ಲಾಳ್ ಅವರನ್ನು ಭಾರತೀಯ ವೈದ್ಯರ ಸಂಘ ಉಡುಪಿ ಕರಾವಳಿ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.
ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಡಾ. ಶ್ರುತಿ, ಮಧುಮೇಹ ತಡೆಗಟ್ಟುವಿಕೆ, ಮುಂದೂಡಿಕೆ, ಆರೈಕೆ, ಉತ್ತಮ ಜೀವನ ಶೈಲಿಯ ಕುರಿತಾಗಿ ಜಾಗೃತಿ ಮೂಡಿಸುತ್ತಾರೆ. ಈ ಕುರಿತಂತೆ ಶಾಲಾ-ಕಾಲೇಜು ಮತ್ತು ಸಂಘ&ಸಂಸ್ಥೆಗಳ ಸಹಕಾರದಲ್ಲಿ ಈಗಾಗಲೇ 90ಕ್ಕೂ ಅಧಿಕ ಉಚಿತ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನೀಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಭಾ.ವೈ. ಸಂಘ ಉಡುಪಿ ಕರಾವಳಿ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಡಾ. ಆಮ್ನಾ ಹೆಗ್ಡೆ, ಡಾ. ಅರ್ಚನಾ ಭಕ್ತ, ಡಾ. ಇಂದಿರಾ ಶಾನ್ಭಾಗ್, ಡಾ. ಅಕ್ಷತಾ ರಾವ್ ಉಪಸ್ಥಿತರಿದ್ದರು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಯನ್ನು ಸಂಘದ ಉಡುಪಿ ಶಾಖೆ ಕರಾವಳಿಯ ಹಿರಿಯ ಸದಸ್ಯೆ ಡಾ. ಸುಧಾ ಕಾಮತ್ ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಪ್ರದಾನ ಮಾಡಲಾಯಿತು. ಸಚಿವ ಡಾ. ಎಚ್.ಕೆ. ಪಾಟೀಲ್, ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್ ಹಾಗೂ ಗೌರವ ಕಾರ್ಯದರ್ಶಿ ಡಾ. ಕರುಣಾಕರ್ ಇತರರಿದ್ದರು.