ಜಿಲ್ಲೆ

ಡಾ.ಶಂಕರ ಮಹಾದೇವ ಬಿದರಿಗೆ ಪವಾಡ ಶ್ರೀಪ್ರಶಸ್ತಿ

ನೆಲಮಂಗಲ: ಪ್ರತಿ ವರ್ಷದಂತೆ ಈ ಬಾರಿಯೂ ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ಏ.30ರಂದು ವಿಜೃಂಭಣೆಯ ಬಸವಜಯಂತಿ ಆಯೋಜಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಶ್ರೀಸಿದ್ಧಲಿಂಗಸ್ವಾಮೀಜಿ ತಿಳಿಸಿದರು.

ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಠದಿಂದ ಬಸವ ಜಯಂತಿ ಉತ್ಸವ ಆರಂಭಗೊಂಡು 10 ವರ್ಷಗಳಾಗಿದ್ದರೆ, ನಾಡಿನ ಗಣ್ಯರೊಬ್ಬರಿಗೆ ನೀಡುವ ಪವಾಡ ಶ್ರೀಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 8 ವರ್ಷಗಳು ಪೂರೈಸಿವೆ. ಚೊಚ್ಚಲ ಪವಾಡ ಶ್ರೀಪ್ರಶಸ್ತಿಯನ್ನು ನಡೆದಾಡುವ ದೇವರೆಂದೆ ಖ್ಯಾತರಾಗಿದ್ದ ಸಿದ್ದಗಂಗಾ ಶಿವಕುಮಾರ ಶ್ರೀ ಗಳಿಗೆ ನೀಡಿದ್ದು ಬಳಿಕ ಹೃದ್ರೋಗ ತ ಮಂಜುನಾಥ್​, ವಿಆರ್​.ಎಲ್​.ಮೀಡಿಯಾ ಸಂಸ್ಥಾಪಕ ವಿಜಯಸಂಕೇಶ್ವರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿಯ ಪವಾಡ ಶ್ರೀಪ್ರಶಸ್ತಿಗೆ ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಡಾ.ಶಂಕರಮಹಾದೇವ ಬಿದರಿ ಭಾಜನರಾಗಿದ್ದು, ಏ.30 ರಂದು ನಡೆಯುವ ಬಸವಜಯಂತಿಯಲ್ಲಿ ಪ್ರದಾನ ಮಾಡಲಾಗುವುದು ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ರಾಜ್ಯಪಾಲರ ಆಗಮನ

ರಾಜ್ಯಪಾಲ ಥಾವರ್​ ಚಂದ್​ ಗೆಹಲೋತ್​ ಕಾರ್ಯಕ್ರಮ ಉದ್ಘಾಟನೆ ಜತೆಗೆ ಪವಾಡ ಶ್ರೀಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಎನ್​.ಶ್ರೀನಿವಾಸ್​ ಅಧ್ಯಕ್ಷತೆ ವಹಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್​.ಅಶೋಕ್​, ಶಾಸಕ ಎಸ್​.ಆರ್​.ವಿಶ್ವನಾಥ್​, ಎಂಎಲ್ಸಿ ಎಸ್​. ರವಿ ಭಾಗವಹಿಸಲಿದ್ದಾರೆ ಎಂದು ಮಠದ ಸಂಸತ ಉಪನ್ಯಾಸಕ ಅಭಿಲಾಷ್​ ಮಾಹಿತಿ ನೀಡಿದರು.

ಪ್ರತಿವರ್ಷ ವಿಶೇಷವಾಗಿ ಬಸವಜಯಂತಿ ಆಚರಣೆ ಮಾಡಲಾಗುತ್ತಿದೆ. ಶಿವಕುಮಾರ ದರ್ಶನ, ವಚನ ಶಿಕ್ಷಣದಂತಹ ಕೃತಿಗಳು ಲೋಕಾರ್ಪಣೆ ಆಗಲಿವೆ ಎಂದರು.

ಉತ್ಸವ ಮೂರ್ತಿ ಮೆರವಣಿಗೆ

ಬಸವಜಯಂತಿ ಪ್ರಯುಕ್ತ 30ರಂದು ಬೆಳಗ್ಗೆ 9.45 ಗಂಟೆಗೆ ೇತ್ರಾಧಿಪತಿ ಪವಾಡ ಶ್ರೀ ಬಸವಣ್ಣದೇವರ ರಥೋತ್ಸವ ಆಯೋಜಿಸಿದ್ದರೆ ಅದೇ ದಿನ ಸಂಜೆ 4 ಗಂಟೆಗೆ ಅಶ್ವಾರೂಢ ಬಸವೇಶ್ವರರ ಬೃಹತ್​ ಉತ್ಸವ ಮೂರ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಶಾಂತಕುಮಾರ್​ ಸಭೆಗೆ ಮಾಹಿತಿ ನೀಡಿದರು.

ಸಹಸ್ರ ವಚನ ಕಂಠಪಾಠ ಸ್ಪರ್ಧೆ

ಬಸವಜಯಂತಿ ಪ್ರಯುಕ್ತ ಈ ಬಾರಿ ವಿಶೇಷವಾಗಿ ರಾಜ್ಯಮಟ್ಟದ ಸಾವಿರ ವಚನಗಳ ಕಂಠಪಾಠ ಸ್ಪರ್ಧೆ ಆಯೋಜಿಸಿದ್ದು, ರಾಜ್ಯದ 150ಕ್ಕೂ ಹೆಚ್ಚು ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಹಸ್ರ ವಚನ ಹೇಳಿದ ಮೊದಲ ಸ್ಪರ್ಧಿಗೆ ಒಂದು ಲಕ್ಷ, 900 ಮೇಲ್ಪಟ್ಟು ವಚನ ಹೇಳಿದಲ್ಲಿ 75 ಸಾವಿರ, 800 ಮೇಲ್ಪಟ್ಟು ವಚನ ಹೇಳಿದಲ್ಲಿ 50 ಸಾವಿರ ನಗದು ಬಹುಮಾನ ಪಡೆದುಕೊಳ್ಳಲಿದ್ದಾರೆ ಎಂದು ಉಪನ್ಯಾಸಕ ವಿನಯ್​ ತಿಳಿಸಿದರು.

ವೀರಶೈವಲಿಂಗಾಯಿತ ನೌಕರರ ೇಮಾಭಿವೃದ್ಧಿ ಸಂದ ಅಧ್ಯಕ್ಷ ಪರಮೇಶ್​, ಪದಾಧಿಕಾರಿ ಷಣ್ಮುಖಪ್ಪ, ನಗರಸಭೆ ನಿಕಟಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದಿಪ್​, ಮುಖಂಡರಾದ ಶಾಂತಕುಮಾರ್​, ಮಲ್ಲೇಶಯ್ಯ, ನೆಗಳೂರ್​, ಜಗದೀಶ್​, ಯಾಡಾಳು ಸತೀಶ್​, ಗಂಗಾಧರಯ್ಯ, ಶಿಕ್ಷಕ ರೇಣುಕಾಸ್ವಾಮಿ, ರುದ್ರೇಶ್​, ಪುನೀತ್​, ಮಂಜುಳಾ ಸುರೇಶ್​, ಶೀಲಾಶಿವಶಂಕರ್​, ಸಿದ್ಧಲಿಂಗಯ್ಯ ಇದ್ದರು.