filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಶಿಕ್ಷಣಕ್ಕೆ ಡಾ.ಸರ್ವಪಲ್ಲಿ ಕೊಡುಗೆ ಅಪಾರ

ಕಾಗವಾಡ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ಹೇಳಿ ವಿಶ್ವವಿಖ್ಯಾತರಾಗಿದ್ದಾರೆ ಎಂದು ಯಡೂರು ಸಿದ್ಧಲಿಂಗ ಶಿವಾಚಾರ್ಯ ವೇದಗಮ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಶ್ರೀಶೈಲ ಶಾಸ್ತ್ರೀ ಹೇಳಿದರು.

ತಾಲೂಕಿನ ಉಗಾರ ಖುರ್ದ ಜೈನ ಸಮುದಾಯದ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಕೊಡುಗೆ ಅಪಾರ ಎಂದರು. ತಹಸೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿದರು.

ತಾಲೂಕುಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ತಾಪಂ ಇಒ ವೀರಣ್ಣ ವಾಲಿ, ಸಾಹಿತಿ ಸಂಗಮೇಶ ಗುಜಗೊಂಡ, ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ್, ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಬಿಇಒ ಪಿ.ಬಿ.ಮದಭಾವಿ, ಸಿಡಿಪಿಒ ರವೀಂದ್ರ ಗುದಗೆನ್ನವರ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಭಾವಿ, ಅಣ್ಣಾಸಾಹೇಬ ದೇವಮೋರೆ, ದೈಹಿಕ ಶಿಕ್ಷಾಧಿಕಾರಿ ಎಂ.ವೈ.ಪೂಜಾರಿ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಇತರರಿದ್ದರು.