ಬೆಂಗಳೂರು: ಪಂಡಿತರತ್ನ ಎ.ಶಾಂತಿರಾಜ ಶಾಸಿ ಟ್ರಸ್ಟ್ ವತಿಯಿಂದ ನೀಡುವ 2023ನೇ ಸಾಲಿನ 'ಆದರ್ಶ ಜೈನ ಮಹಿಳಾರತ್ನ' ಪ್ರಶಸ್ತಿಗೆ ಮೈಸೂರಿನ ಸಾಹಿತಿ ಡಾ. ಸರಸ್ವತಿ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅ.1 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಟ್ರಸ್ಟ್ನ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ವಿದ್ಯಾಧರ್, ಪಿ.ವೈ.ರಾಜೇಂದ್ರ ಕುಮಾರ್, ಪದ್ಮರಾಜ ದಂಡಾವತಿ ಹಾಗೂ ಜಿ.ಪಿ.ನಾಗೇಂದ್ರ ಪ್ರಸಾದ್ ಅವರನ್ನು ಒಳಗೊಂಡ ಸಮಿತಿಯ ಡಾ. ಸರಸ್ವತಿ ವಿಜಯಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.