ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶಿಕ್ಷಣ ವಿಭಾಗದ ಡಾ.ಸಾಹೇಬ ಅಲಿ ಎಚ್.ನಿರುಗುಡಿ ಅವರು ನಿಕಟಪೂರ್ವ ಕುಲಪತಿ ಸಿದ್ದು ಅಲಗೂರ ಅವರಿಂದ ಅಧಿಕಾರ ಸ್ವೀಕರಿಸಿದರು.  
ಜಿಲ್ಲೆ

ವಿಎಸ್‌ಕೆ ವಿವಿಗೆ ಡಾ.ಸಾಹೇಬ ಅಲಿ ನಿರುಗುಡಿ ಪ್ರಭಾರ ಕುಲಪತಿ

ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶಿಕ್ಷಣ ವಿಭಾಗದ ಡಾ.ಸಾಹೇಬ ಅಲಿ ಎಚ್.ನಿರುಗುಡಿ ಅವರನ್ನು ನೇಮಕ ಮಾಡಲಾಗಿದೆ.

ನಿಕಟಪೂರ್ವ ಕುಲಪತಿ ಪ್ರೊ.ಸಿದ್ದು ಪಿ. ಅಲಗೂರು ಅವರು ಮಂಗಳವಾರ ಅಧಿಕಾರವನ್ನು ಹಸ್ತಾಂತರ ಮಾಡಿದರು. ಸಿದ್ದು ಅಗೂರ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಭಾರ ಕುಲಪತಿಯಾಗಿ ಸಾಹೇಬ ಅಲಿ ಅವರು ಅಧಿಕಾರ ಸ್ವೀಕರಿಸಿದರು.