ಬೆಳಗಾವಿ: ಬೆಳಗಾವಿ ನಗರ ಸಮಗ್ರ ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಹೇಳಿದರು.
ಬೆಳಗಾವಿ ಮಹಾಂತೇಶ ಮಗರದ ಮಹಾಂತ ಭವನದಲ್ಲಿ ಶುಕ್ರವಾರ ಜರುಗಿದ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ಲಿಂಗಾಯತ ಸಮಾಜ ಹೋರಾಟದ ಫಲವಾಗಿ ನನಗೆ ಟಿಕೆಟ್ ಸಿಕ್ಕಿದೆ. ಅದರಂತೆ ಹೋರಾಟ ಮಾಡಿ ನನ್ನನ್ನು ಗೆಲ್ಲಿಸುವ ಜವಾಬ್ದಾರಿ ಕೂಡ ನಿಮ್ಮಮೇಲಿದೆ.ನಿಮ್ಮನಂಬಿಕೆ, ವಿಶ್ವಾಸ,ಪ್ರೋತ್ಸಾಹಕ್ಕೆ ಕಪ್ಪು ಚುಕ್ಕೆ ಬಾರದಂತೆ ಕ್ಷೇತ್ರ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಬಾರಿ ಚುನಾವಣೆಯಲ್ಲಿ ಸಮಾಜದವರು ಕಡ್ಡಾಯವಾಗಿ ಮತದಾನ ಮಾಡಬೇಕು.ಇದು ಪ್ರತಿಯೊಬ್ಬರಿಗೆ ಸ್ವಾಭಿಮಾನದ ಪ್ರಶ್ನೆ ಯಾಗಿದೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದರು.
ಪಾಲಿಕೆ ಸದಸ್ಯಹನುಮಂತ ಕೊಂಗಾಲಿ ಮಾತನಾಡಿ, ಈ ಬಾರಿ ಚುನಾವಣೆ ನಮ್ಮಸಮಾಜಕ್ಕೆ ಸ್ವಾಭೀಮಾನ ಪ್ರಶ್ನೆ ಎದುರಾಗಿದೆ. ನಾವುಹೋರಾಟ ಮಾಡಿ ಟಿಕೆಟ್ ಪಡೆದಿದ್ದೇವೆ. ಇದೀಗ ನಾವು ಹೋರಾಟ ಮಾಡಿ ಗೆಲ್ಲಿಸುವುದು ಸ್ವಾಭೀಮಾನದ ಪ್ರಶ್ನೆಯಾಗಿದೆ. ಮತದಾನ ಮಾಡದಿದ್ದರೆ ನಮ್ಮ ಸಮಾಜಕ್ಕೆ ನಷ್ಟವಾಗುತ್ತದೆ ಎಂದರು.