ರಾಜಸ್ಥಾನದ ಜೈಪುರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಸಚಿವ ಹರ್ಷ ಮಲ್ಹೋತ್ರ ಸತ್ಕರಿಸಿದರು. 
ಜಿಲ್ಲೆ

ಡಾ. ರಾಮಣ್ಣವರಗೆ ಸತ್ಕಾರ

ಶಂಕರ ಗೆಜ್ಜಿ

ಬೆಳಗಾವಿ: ರಾಜಸ್ಥಾನದ ಜೈಪುರದಲ್ಲಿ ಜೈನ ಸೋಷಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದಾದಿಚಿ ದೇಹದಾನ ಸಮಿತಿ ಆಶ್ರಯದಲ್ಲಿ ಆ.16ರಿಂದ 18ರವರೆಗೆ ನಡೆದ ರಾಷ್ಟ್ರೀಯ ದೇಹದಾನ ಮತ್ತು ಅಂಗಾಂಗ ದಾನ ಜಾಗೃತಿ ಸಮಾವೇಶದಲ್ಲಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಸಚಿವ ಹರ್ಷ ಮಲ್ಹೋತ್ರ ಸತ್ಕರಿಸಿದರು.

ಡಾ.ಮಹಾಂತೇಶ ರಾಮಣ್ಣವರ ಮಾತನಾಡಿ, ಅಂಗರಚನಾ ಶಾಸ್ತ್ರದ ಕಾಯ್ದೆ ಪ್ರಕಾರ ಮೃತದೇಹವನ್ನು ವೈದ್ಯಕೀಯ ಸಂಸ್ಥೆಗೆ ಸ್ವೀಕರಿಸುವಲ್ಲಿ ಕಾನೂನು ತೊಡಕುಗಳು, ಮರಣ ಪ್ರಮಾಣಪತ್ರದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ದೇಹದಾನದ ಜಾಗೃತಿಗಾಗಿ ನಾನು ನಮ್ಮ ತಂದೆಯವರ ಮೃತದೇಹವನ್ನೇ ಛೇದಿಸಿರುವುದಾಗಿ ತಿಳಿಸಿದರು.

ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ಅಲೋಕಕುಮಾರ, ಕಮಲಕುಮಾರ ಸಚೇತಿ, ಡಾ. ಸಂಜೀವ ಶರ್ಮಾ, ಡಾ.ಸುನೀಲ ಯಾದವ, ಕಲಬುರಗಿಯ ಡಾ.ಶಿವಾನಂದ ಹೂಗಾರ ಇತರರುದ್ದರು.