ಜಿಲ್ಲೆ

ಡಾ.ರಾಜ್‌ಕುಮಾರ್ ಜಯಂತ್ಯುತ್ಸವ

ಆರ್.ಕೃಷ್ಣ

ಮೈಸೂರು: ನಗರದ ಡಾ.ರಾಜ್‌ಕುಮಾರ್ ಕಲಾಸೇವಾ ಟ್ರಸ್ಟ್‌ನಿಂದ ಒಂದು ವಾರ ನಾದಬ್ರಹ್ಮ ಸಭಾಂಗಣದಲ್ಲಿ ಡಾ.ರಾಜ್‌ಕುಮಾರ್ 96ನೇ ಜಯಂತ್ಯುತ್ಸವ ಆಯೋಜಿಸಲಾಗಿತ್ತು.
ಕಲಾಪೋಷಕ ಮೈಸೂರು ಜಯರಾಂ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏ.23ರಂದು ಡಾ.ರಾಜ್‌ಕುಮಾರ್ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿರುವ ಗೀತೆಗಳು, ಏ.24ರಂದು ಡಾ.ರಾಜ್‌ಕುಮಾರ್ ಅವರೇ ಹಾಡಿರುವ ಗೀತೆಗಳು, ಏ.25ರಂದು ಸಹ ನಟರಿಗೆ ಹಾಡಿರುವ ಗೀತೆಗಳ ಗಾಯನ, ಏ.26ರಂದು ಅಣ್ಣಾವ್ರ ಚಿತ್ರಗಳ ಮಹಿಳಾ ಪ್ರಧಾನ ಗೀತೆಗಳು ಮತ್ತು ಅಣ್ಣಾವ್ರ ಹಾಡಿರುವ ವಿರಸ ಗೀತೆಗಳು, ಏ.28 ಹಾಗೂ ಏ.29ರಂದು ಯುಗಳ ಗೀತೆಗಳು, ಏ.30ರಂದು ಇತರ ಗಾಯಕರು ಡಾ.ರಾಜ್‌ಕುಮಾರ್ ಅವರಿಗಾಗಿ ಹಾಡಿರುವ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಾಯಿತು.