ಜಿಲ್ಲೆ

ಪ್ರಮೀಳಾ ಡಿಸೋಜ ಅವರಿಗೆ ಪಿಎಚ್‌ಡಿ

ಮಂಗಳೂರು: ನಗರದ ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ ಸ್ತ್ರೀರೋಗ ಮತ್ತು ಹೆರಿಗೆಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಪ್ರಮೀಳಾ ಡಿಸೋಜ ಅವರು ಇಫೆಕ್ಟಿವ್‌ನೆಸ್ ಆಫ್ ಮಲ್ಟಿ ಮೊಡ್ಯುಲರ್ ಇಂಟರ್ವೆನ್ಶನ್ಸ್ ಆಫ್ ಲೈಫ್‌ಸ್ಟೈಲ್ ಮೋಡಿಫಿಕೇಶನ್ ಒನ್ ಸಿಂಫ್ಟಮ್ಸ್ ಒಫ್ ಪೊಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಆಂಡ್ ಕ್ವಾಲಿಟಿ ಆಫ್ ಎಮಂಗ್ ವಿಮೆನ್ ಇನ್ ಸಿಲೆಕ್ಟೆಡ್ ಹೊಸ್ಪಿಟಲ್ಸ್, ಮಂಗಳೂರು, ಇಂಡಿಯಾ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಯೇನೆಪೋಯ ಡೀಮ್ಡ್ ಯುವಿವರ್ಸಿಟಿ  ಪಿಎಚ್‌ಡಿ ಪದವಿ ನೀಡಿದೆ.
ಈ ಮಹಾಪ್ರಬಂಧವನ್ನು ಅವರು ಮಂಗಳೂರು ಯೆನೆಪೊಯಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥ ಡಾ.ಕೆ. ರಾಜಗೋಪಾಲ್ ಅವರ ಮಾರ್ಗದರ್ಶನ ಮತ್ತು  ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ ಪ ಪ್ರಾಂಶುಪಾಲರಾದ ಡಾ.ದೇವಿನಾ ರೊಡ್ರಿಗಸ್ ಅವರ ಸಹ - ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು.
ಪ್ರಮೀಳಾ ಡಿಸೊಜಾ ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದು, ಇಂಗಿಷ್ ಪ್ರಾಧ್ಯಾಪಕ ರೋಶನ ಮಾಡ್ತಾ ಅವರ ಪತ್ನಿ.