ಬೆಳಗಾವಿ: ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿ ಮಹಾವಿದ್ಯಾಲಯದ ಎನ್ಸಿಸಿ ಕೆಡೆಟ್ ಓಂಕಾರ ಪ್ರಕಾಶ ಲೋಗಾವಿ ಈಚೆಗೆ ದೆಹಲಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸೈನಿಕ ಶಿಬಿರಕ್ಕೆ ಆಯ್ಕೆಯಾಗಿದ್ದಾನೆ.
ಓಂಕಾರ 26 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕೆಡೆಟ್ ಆಗಿದ್ದು, ಮೈಸೂರಿನಲ್ಲಿ ಜರುಗಿದ ನಿರ್ಣಾಯಕ ಅಂತಿಮ ಸುತ್ತಿನ ಸೈನಿಕ ಶಿಬಿರದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಅದ್ವೀತಿಯ ಸಾಧನೆ ಮಾಡಿದ್ದಾನೆ.
ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಪ್ರಧಾನ ಕಚೇರಿಯಲ್ಲಿ ವಿದ್ಯಾರ್ಥಿಯನ್ನು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಲಿಂಗರಾಜ ಕಾಲೇಜ್ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಎನ್ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಇದ್ದರು.