ಮಂಗಳೂರು : ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ನಾಗುರಿ ಗಾರ್ಡಿಯನ್ ಏಂಜಲ್ ಚರ್ಚ್‌ಗೆ ಇತ್ತೀಚೆಗೆ ಅಧಿಕೃತ ಭೇಟಿ ನೀಡಿದರು. ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ವಿಲಿಯಂ ಮಿನೇಜಸ್, ಸಹಾಯಕ ಧರ್ಮಗುರು ಜೆರಾಲ್ಡ್ ಪಿಂಟೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್ ಮತ್ತು ಕಾರ್ಯದರ್ಶಿ ಲೊಲಿನಾ ಡಿಸೋಜ 21 ಆಯೋಗಗಳ ಸಂಯೋಜಕಿ ರೆನಿಟಾ ಮಿನೇಜಸ್ ಧರ್ಮಾಧ್ಯಕ್ಷರನ್ನು ಸ್ವಾಗತಿಸಿದರು. ನಂತರ ನಡೆದ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರು 53 ಮಂದಿ ಮಕ್ಕಳಿಗೆ ದೃಢೀಕರಣದ ಸಂಸ್ಕಾರ ನೀಡಿದರು.