ಸಿರವಾರದಲ್ಲಿ ಯಲ್ಲಮ್ಮ ದೇವಿಯ ಮೂರ್ತಿ ಮೆರವಣಿಗೆ ಬುಧವಾರ ನಡೆಯಿತು. 
ಜಿಲ್ಲೆ

ಯಲ್ಲಮ್ಮ ದೇವಿ ಮೂರ್ತಿ ಮೆರವಣಿಗೆ ಅದ್ದೂರಿ

ಸಿರವಾರ: ಪಟ್ಟಣದ ವಾರ್ಡ್ 7ರಲ್ಲಿ ಯಲ್ಲಮ್ಮ ದೇವಿ ಮೂರ್ತಿ ಪ್ರತಿಷ್ಠಾಪಣೆ ಅಂಗವಾಗಿ ಬುಧವಾರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಡೊಳ್ಳು ವಾದ್ಯಗಳು, ಮುತ್ತೈದೆಯರ ಕುಂಭಕಳಸದೊಂದಿಗೆ ಮೆರವಣಿಗೆಗೆ ಮೆರುಗು ಹೆಚ್ಚಿಸಿತು. ಶುಕ್ರವಾರ ಬೆಳಗ್ಗೆ ನೀಲಗಲ್‌ನ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಯರಮರಸ್ ನ ಚರಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳಿಂದ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಭಕ್ತ ಮಂಡಳಿ ತಿಳಿಸಿದೆ. ವಾರ್ಡ್‌ನ ನಿವಾಸಿಗಳು, ಮುಖಂಡರು ಹಾಗೂ ಮಹಿಳೆಯರು, ದೇವಸ್ಥಾನ ಸಮಿತಿ ಸದಸ್ಯರು ಭಾಗವಹಿಸಿದ್ದರು.