ಜಿಲ್ಲೆ

ಸರ್ವಾಧ್ಯಕ್ಷರಾಗಿ ಡಾ. ನಿತಿನಚಂದ್ರ ಹತ್ತಿಕಾಳ ಆಯ್ಕೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕುಲಪುರೋಹಿತ ಆಲೂರು ವೆಂಕಟರಾವ್​ ಭವನದಲ್ಲಿ ಮಾ. 25ರಂದು ನಡೆಯಲಿರುವ ಧಾರವಾಡ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ವೈದ್ಯ ಡಾ. ನೀತಿನಚಂದ್ರ ಹತ್ತಿಕಾಳ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಪದಾಧಿಕಾರಿಗಳು ಡಾ. ನೀತಿನಚಂದ್ರ ಹತ್ತಿಕಾಳ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಅಧಿಕೃತ ಆಮಂತ್ರಣ ಪತ್ರಿಕೆ ನೀಡಿದರು.

ಸರ್ವಾಧ್ಯಕ್ಷ ಡಾ. ನೀತಿನಚಂದ್ರ ಹತ್ತಿಕಾಳ ಮಾತನಾಡಿ, ವೈದ್ಯಕಿಯ ಸೇವೆಯಲ್ಲಿ ರೋಗಿಗಳಿಗೆ ಅವರ ಹೆಸರನ್ನು ಹಾಗೂ ಔಷಧ ತೆಗೆದುಕೊಳ್ಳುವ ವಿವರವನ್ನು ಕನ್ನಡದಲ್ಲೇ ಬರೆಯುವ ರೂಢಿ ಇಟ್ಟುಕೊಂಡಿದ್ದೇನೆ. ಕನ್ನಡ ಸೇವೆಗೆ ಸದಾ ಬದ್ಧನಾಗಿದ್ದೇನೆ ಎಂದರು.

ಡಾ. ಹತ್ತಿಕಾಳ ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ ಎಸ್​ ಕೌಜಲಗಿ, ಗಣೇಶ ಕದಂ, ಚಂದ್ರಶೇಖರ ಮಹಾಜನ್​ ಶೆಟ್ಟರ್​, ರೇಖಾ ಜೋಶಿ, ಗುರು ತಿಗಡಿ, ಡಾ. ಬಸವರಾಜ ಅಂಗಡಿ, ಮಲ್ಲಿಕಾರ್ಜುನ ಮಠಪತಿ, ಎಂ.ಎ. ಭಾವಿಕಟ್ಟಿ, ಎ.ಎಲ್​. ಗೋರೆಬಾಳ, ಶಿವಾನಂದ ಕವಳಿ, ಶಾಂತವೀರ ಬೆಟಗೇರಿ ಮಾತನಾಡಿದರು.

ಮಹಾಂತೇಶ ನರೇಗಲ್​ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.