ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟ ಡಾ.ಮುರಲಿಮೋಹನ್ ಚೂಂತಾರು ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು. ಸುಬ್ರಹ್ಮಣ್ಯದ ಪ್ರಭಾರ ಘಟಕಾಧಿಕಾರಿ ಹರಿಶ್ಚಂದ್ರ ಸಹಿತ ಹಲವು ಗೃಹರಕ್ಷಕರು ಇದ್ದರು. 
ಜಿಲ್ಲೆ

ವಿಕೋಪ ತಡೆಗೆ ಗೃಹರಕ್ಷಕ ದಳ ಸಿದ್ಧ: ಸಮಾದೇಷ್ಟ ಮುರಲೀಮೋಹನ ಚೂಂತಾರು ಭರವಸೆ

ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಪ್ರಕೃತಿ ವಿಕೋಪ ಎದುರಿಸಲು ಗೃಹರಕ್ಷಕ ದಳ ಸನ್ನದ್ಧವಾಗಿದೆ. ಪೂರ್ವ ಸಿದ್ಧತೆಯಿಂದ ಹಾನಿ ಪ್ರಮಾಣ ತಗ್ಗಿಸಬಹುದು. ದಿನದ 24 ಜಂಟೆಗಳೂ ಎಚ್ಚರಿಕೆ ವಹಿಸಲು ಗೃಹರಕ್ಷಕ ದಳಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟ ಡಾ.ಮುರಳಿ ಮೋಹನ್ ಚೂಂತಾರ್ ಹೇಳಿದರು.

ಸುಬ್ರಹ್ಮಣ್ಯದ ಗೃಹರಕ್ಷಕ ದಳದ ಕಚೇರಿಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು. ಪ್ರಕೃತಿ ವಿಕೋಪ ಎದುರಿಸುವ ಬಗ್ಗೆ ಸಮಾದೇಷ್ಟರು ಮಾಹಿತಿ ನೀಡಿದ್ದು, ಜತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು. ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ಪರಿಶೀಲಿಸಲಾಯಿತು. ಸುಬ್ರಹ್ಮಣ್ಯ ಗೃಹರಕ್ಷಕ ದಳ ಪ್ರಭಾರ ಘಟಕಾಧಿಕಾರಿ ಹರಿಶ್ಚಂದ್ರ, ಗೃಹರಕ್ಷಕರಾದ ಸುನಿಲ್, ಸಂಜಯ್, ನೇತ್ರಾ, ರವಿಚಂದ್ರ, ಪ್ರಕಾಶ್ ಉಪಸ್ಥಿತರಿದ್ದರು.