ಧಾರವಾಡ: ಅಧ್ಯಾಪಕ, ಸಂಶೋಧಕ ಹೇಗಿರಬೇಕು ಎಂಬುದಕ್ಕೆ ಡಾ. ಎಂ.ಎಂ. ಕಲಬುರ್ಗಿ ಮಾದರಿಯಾಗಿದ್ದರು. ಕನ್ನಡ ಪ್ರಜ್ಞೆಯ ಪ್ರತೀಕ ಆಗಿದ್ದರು ಎಂದು ಕನ್ನಡ ಅಭಿವೃದ್ಧಿ ಪ್ರಾಽಕಾರದ ಮಾಜಿ ಅಧ್ಯಕ್ಷ, ಸಾಹಿತಿ ಡಾ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತಿಚೆಗೆ ಆಯೋಜಿಸಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ 85ನೇ ಜನ್ಮದಿನದ ಸ್ಮರಣೆಯ ದತ್ತಿ ಉದ್ಘಾಟನೆ ಹಾಗೂ ಡಾ. ಎಂ.ಎಂ. ಕಲಬುರ್ಗಿ: 85' ಹಾಗೂದಣಿವರಿಯದ ಗುರು' ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಬುರ್ಗಿಯವರು ಸೂರ್ಯ, ಚಂದ್ರರ ಹಾಗೆ ಜಗತ್ತಿಗೆ ಸದಾ ಬೆಳಕನ್ನು ನೀಡುವವರು. ಪಾದರಸದಂತಿದ್ದ ಅವರು ಯಾವಾಗಲೂ ಸಾಹಿತ್ಯ, ಸಂಸ್ಕೃತಿ, ಸಮಾಜದ ಕುರಿತು ಮಾತನಾಡುತ್ತಿದ್ದರು. ಸಮಯ ಪರಿಪಾಲಕ, ಪ್ರಾಮಾಣಿಕ ಕಾಯಕ ನಿಷ್ಠೆಯನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿದ ಮಹಾಗುರು ಎಂದರು.
ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ನ್ಯಾಯನಿಷ್ಠುರಿ ಶರಣ ಕಲಬುರ್ಗಿ ಗುರುಗಳು ಮರೆಯಲಾಗದ ಇತಿಹಾಸ ಕೊಟ್ಟು ಅಮರರಾದರು ಎಂದರು.
ಡಾ. ಎಫ್.ಟಿ. ಹಳ್ಳಿಕೇರಿ ರಚಿಸಿದ ದಣಿವರಿಯದ ಗುರು' ಹಾಗೂ ಡಾ. ಎಸ್.ವೈ. ಸೋಮಶೇಖರಯ್ಯ ಮತ್ತು ಡಾ. ಡಿ.ವಿ. ಪರಮಶಿವಮೂರ್ತಿ ಸಂಪಾದಿಸಿದಡಾ. ಎಂ.ಎಂ. ಕಲಬುರ್ಗಿ: 85' ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಎಸ್.ವೈ. ಸೋಮಶೇಖರಯ್ಯ ಹಾಗೂ ದತ್ತಿದಾನಿಗಳಾದ ಡಾ. ಶಶಿಧರ ತೋಡಕರ ಮಾತನಾಡಿದರು.
ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ ಎಂ. ಕಲಬುರ್ಗಿ ವೇದಿಕೆಯಲ್ಲಿದ್ದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಪ್ರಭು ಹೊಸಕೇರಿ ಸ್ವಾಗತಿಸಿದರು. ಡಾ. ಶೈಜಲಾ ಅಮರಶೆಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ರತಿಕಾ ನೃತ್ಯನಿಕೆತನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಗುರು ಹಿರೇಮಠ ಡಾ. ಮಹೇಶ ಹೊರಕೇರಿ, ಡಾ. ಶ್ರೀಶೈಲ ಹುದ್ದಾರ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ ಅತಿಥಿಗಳನ್ನು ಗೌರವಿಸದರು.
ಡಾ. ಸಿ.ಆರ್. ಯರವಿನತೇಲಿಮಠ, ಡಾ. ರವೀಂದ್ರನಾಥ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟಿ, ಶಿವಾನಂದ ಭಾವಿಕಟ್ಟಿ, ಅರವಿಂದ ಕಪಲಿ, ಎಂ.ಎಂ ಚಿಕ್ಕಮಠ, ಹನುಮಾಕ್ಷಿ ಗೋಗಿ, ವೆಂಕಟೇಶ ಮಾಚಕನೂರ, ಬಿ. ಮಾರುತಿ, ಬಿ.ಜಿ. ಬಾರ್ಕಿ, ಇತರರಿದ್ದರು.