ಕಂಪ್ಲಿಯ ಹೊಸ ಬಸ್ ನಿಲ್ದಾಣ ಬಳಿ ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಐ.ಹೊನ್ನೂರ್‌ಸಾಬ್, ಕೆ.ಮೆಹಬೂಬ್, ಎಂ.ಉಸ್ಮಾನ್, ಎಂ.ರಾಜಬಕ್ಷಿ, ಯೂನಸ್ ಇತರರಿದ್ದರು. 
ಜಿಲ್ಲೆ

ಡಾ.ಮೌಲಾನಾ ಆಜಾದ್ ಪುತ್ಥಳಿ ನಿರ್ಮಿಸಿ

ಕಂಪ್ಲಿ: ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯ ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತದಲ್ಲಿ ಸೋಮವಾರ ಅಬುಲ್ ಕಲಾಂ ಅವರ 135ನೇ ಜಯಂತಿ ನಿಮಿತ್ತ ಶಿಕ್ಷಣ ದಿನ ಆಚರಿಸಲಾಯಿತು.

ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಮುಸ್ಲಿಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ.ಹೊನ್ನೂರ್‌ಸಾಬ್ ಮಾತನಾಡಿ, 2001ರಲ್ಲಿ ಪುರಸಭೆ ಬಸ್ ನಿಲ್ದಾಣ ಬಳಿ ಅಬುಲ್ ಕಲಾಂ ಆಜಾದ್ ವೃತ್ತ ನಿರ್ಮಿಸಿ, ಪುತ್ಥಳಿ ಸ್ಥಾಪಿಸಲು ಠರಾವ್ ಪಾಸ್ ಮಾಡಿತ್ತು. ಆದರೆ, ಈವರೆಗೆ ಕಾರ್ಯಗತವಾಗಿಲ್ಲ. ಕೂಡಲೇ ಶಾಸಕ ಜೆ.ಎನ್.ಗಣೇಶ್ ವೃತ್ತ ನಿರ್ಮಿಸಿ, ಪುತ್ಥಳಿ ನಿರ್ಮಿಸಬೇಕು. ಶಾದಿ ಮಹಲ್, ಆಜಾದ್ ಕಾಲೇಜು ಆರಂಭಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್‌ಸಾಬ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು-ಮುಸ್ಲಿಮರನ್ನು ಒಗ್ಗೂಡಿಸುವಲ್ಲಿ ಅಬುಲ್ ಕಲಾಂ ಆಜಾದ್ ಮಹತ್ವದ ಪಾತ್ರವಹಿಸಿದ್ದರು ಎಂದರು. ಪ್ರಮುಖರಾದ ಎಂ.ರಾಜಬಕ್ಷಿ, ಯೂನೂಸ್, ರಾಜಾಮೇಸ್ತ್ರಿ, ಕೆ.ಮೆಹಬೂಬ್, ಮಹ್ಮದ್, ಹೊನ್ನೂರವಲಿ, ಹೊನ್ನೂರಸಾಬ್, ವಹಾಬ್, ಫಯಾಜ್, ಹುಸೇನ್‌ಬಾಷಾ, ಮಹಾಬಾಷಾ, ಪ್ರಮುಖರಾದ ಎಂ.ಉಸ್ಮಾನ್, ಎಚ್.ನವಾಬ್‌ಸಾಬ್, ಅಬ್ದುಲ್ ವಾಹೀದ್, ಬಿ.ರಸೂಲ್, ಬಡಿಗೇರ ಜಿಲಾನ್‌ಸಾಬ್, ರೆಹಮತುಲ್ಲಾ ಇತರರಿದ್ದರು.