ಜಿಲ್ಲೆ

ಖ್ಯಾತ ವೈದ್ಯ ಡಾ. ಮಲ್ಲಿಕಾಜುನ ನಿಷ್ಠಿ ದೈವಾಧೀನ

ಬಾಬುರಾವ ಯಡ್ರಾಮಿ

ಹಿರಿಯ ಅಳಿಯರನ್ನು ಕಳೆದುಕೊಂಡ ಪೂಜ್ಯ ಅಪ್ಪಾಜಿ ತೀವೃ ಶೋಕ

ಕಲಬುರಗಿ:: ಖ್ಯಾತ ವೈದ್ಯ ಡಾ. ಮಲ್ಲಿಕಾಜುನ ನಿಷ್ಠಿ ಮಂಗಳವಾರದಂದು ಬೆಳಿಗ್ಗೆ ಸಂಗಮೇಶ್ವರ ಕಾಲೋನಿಯ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಇವರು ಖ್ಯಾತ ವೈದ್ಯೆ ಡಾ. ಗಂಗಾಂಬಿಕಾ ಅವರ ಪತಿ ಹಾಗೂ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರ ಅಳಿಯರಾಗಿದ್ದರು.
ಪಾರ್ಥಿವ ಶರೀರವನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ತರಲಾಗಿತ್ತು. ದುಖ:ತಪ್ತರಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಅವ್ವಾಜಿಯವರು ಮೃತರಿಗೆ ವಿಭೋತಿ ಹಚ್ಚಿ, ಹೂ ನೀಡಿ ಗೌರವ ಸಲ್ಲಿಸಿದರು. ಮಹಾಮನೆಯ ಹಿರಿಯ ಅಳಿಯರಾದ ಇವರನ್ನು ಕಳೆದುಕೊಂಡ ನಮ್ಮ ಕುಟುಂಬ ತುಂಬಲಾರದ ನಷ್ಠನುಭವಿಸುತ್ತಿದೆ. ಮಹಾಮನೆಯ ಹೀರಿ ಕೂoಡಿ ಇವರಾಗಿದ್ದರು ಎಂದು ಗದ್ಗದಿತರಾದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಇವರದು ಸರಳತೆಯ ಬದುಕು, ಇತರರಿಗೆ ನೀಡುತ್ತಿದ್ದ ಪ್ರೀತಿ ಗೌರವ, ಇವರ ಉತ್ತಮ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿತ್ತು ಎಂದು ಹೇಳುವ ಮೂಲಕ ತೀವೃ ದುಖ:ತಪ್ತರಾಗಿದ್ದರು.

ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ನಿರಂಜನ್‌ ನಿಷ್ಠಿ , ಇವರ ಸಾವು ಅಸಹನೀಯ ಎಂದು ಶೋಕ ವ್ಯಕ್ತಪಡಿಸಿದರು.
ಮೃತರು ಸುರಪುರ ಸಂಸ್ಥಾನದ ಪ್ರಧಾನ ಮಂತ್ರಿಗಳ ಮನೆತನದವರು ಹಾಗೂ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಸಂಘ ಸಂಸ್ಥೆಗಳ ಆಡಳಿತ ಸದಸ್ಯರು ಮತ್ತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಸಲ್ಲಿಸಿದರು. ಮೃತರ ಸ್ವಗೃಹದಲ್ಲಿ ಮಂಗಳವಾರದಂದು ಮಧ್ಯಾಹ್ನ ೧೨.೩೦ ವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇವರ ಅಂತ್ಯಕ್ರಿಯೆಯನ್ನು ಮಂಗಳವಾರ ಸಾಯಂಕಾಲ ೪ ಗಂಟೆಗೆ ಸುರಪುರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹತ್ತಿರ, ನೀಷ್ಠಿ ಜಾಗೀರದಾರ ತೋಟದಲ್ಲಿ ನೇರವೇರಿತ್ತು. ಮೃತರಿಗೆ ಒಬ್ಬ ಮಗ ಇಬ್ಬರೂ ಹೆಣ್ಣು ಮಕ್ಕಳು ಇದ್ದಾರೆ.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ .ಅನೀಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ, ವಿವಿ ಡೀನ ಡಾ. ಲಕ್ಷ್ಮಿ ಪಾಟೀಲ ಮಾಕಾ ಶೋಕ ವ್ಯಕ್ತಪಡಿಸಿದ್ದಾರೆ.ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಬಸವರಾಜ ದೇಶಮುಖ, ಡಾ ಅನೀಲಕುಮಾರ ಬಿಡವೆ ಹಾಗೂ ನಿಷ್ಠಿ ಕುಟುಂಬ, ಮಹಾಮನೆಯ ಕುಟುಂಬ, ದೇಶಮುಖ ಕುಟುಂಬ ಸೇರಿದಂತೆ ಹಲವಾರು ಖ್ಯಾತ ವೇದ್ಯರು, ಸಾವಿರಾರು ಜನರು ಸುರಪುರದಲ್ಲಿ ಜರುಗಲಿರುವ ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.