ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯ ಇಂಗ್ಲಿಷ್ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಹೊನ್ನಾವರದ ಎಸ್ಡಿಎಂ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಡಾ. ಆಸ್ಮಾ ಬಳ್ಳಾರಿ, ಕಾರ್ಯದರ್ಶಿಯಾಗಿ ಡಾ. ಸ್ವಪ್ನಾ ಜಾಧವ, ಜಂಟಿ ಕಾರ್ಯದರ್ಶಿಯಾಗಿ ಪೊ›. ಎ.ಕೆ. ಜಮಾದಾರ, ಖಜಾಂಚಿಯಾಗಿ ಡಾ. ಎಂ.ಕೆ.ಅಂಗಡಿ, ಮಹಿಳಾ ಪ್ರತಿನಿಧಿಯಾಗಿ ಡಾ. ಶಿಲ್ಪಾ ಆಡೂರ, ಧಾರವಾಡ ಜಿಲ್ಲಾ ಪ್ರತಿನಿಧಿಗಳಾಗಿ ಪೊ›. ಎನ್.ವಿ. ಮಡಿವಾಳರ ಮತ್ತು ಡಾ. ವಾದಿರಾಜ ಇನಾಮದಾರ, ಗದಗ ಜಿಲ್ಲಾ ಪ್ರತಿನಿಧಿಗಳಾಗಿ ಪೊ›.ಗಿರಿಧರ ಮತ್ತು ಪೊ›. ನವೀನ ತಿರ್ಲಾಪುರ ಹಾಗೂ ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿಗಳಾಗಿ ಪೊ›. ಲೋಕೇಶ ಹೆಗಡೆ ಮತ್ತು ಪೊ›. ಧನರಾಜ್ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ಗುರುನಾಥ ಬಡಿಗೇರ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.