ಹುಬ್ಬಳ್ಳಿ: ಸಾಹಿತಿ, ಶಿಕ್ಷಣ ತಜ್ಞ, ಹೋರಾಟಗಾರ ಡಾ.ಕೆ.ಎಸ್. ಶರ್ಮಾ (ಕುವಲಯ ಶ್ಯಾಮ ಶರ್ವ) ಅವರ 90ನೇ ಜನ್ಮದಿನಾಚರಣೆಯನ್ನು ಸೆ. 30ರಂದು ಬೆಳಗ್ಗೆ 11.30ಕ್ಕೆ ನಗರದ ಗೋಕುಲ ರಸ್ತೆಯ ಬಸವೇಶ್ವರನಗರದ ಡಾ.ಕೆ.ಎಸ್. ಶರ್ಮಾ ಆವರಣದ ವಿಶ್ವಶ್ರಮ ಚೇತನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಜೀವಿನಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಮೋಹನ ಲಿಂಬಿಕಾಯಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರ್ಮಾ 90ನೇ ಜನ್ಮದಿನಾಚರಣೆ ಸಮಿತಿ, ಸಂಜೀವಿನಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ವತಿಯಿಂದ ಈ ಕಾರ್ಯಕ್ರಮ ಜರುಗಲಿದೆ. ಅಂದು ‘ಚಿಂತನ-ಮಂಥನ’ದ ಒಂಬತ್ತು ಸಂಪುಟಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಅತಿಥಿಗಳಾಗಿ ಸಚಿವರಾದ ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಮಾಜಿ ಸಚಿವ ಎಚ್. ವಿಶ್ವನಾಥ, ಹಿರಿಯ ನ್ಯಾಯವಾದಿ ಮೋಹನ ಕಾತರಕಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು. ಡಾ.ಕೆ. ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಾಂಶುಪಾಲ ಡಾ.ಸಿ.ಸಿ. ಹಿರೇಮಠ, ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ, ತರಬೇತಿ ಅಧಿಕಾರಿ ಪ್ರೊ. ರವೀಂದ್ರ ಶಿರೋಳ್ಕರ, ಡಾ. ಮಹೇಶ ದೇಸಾಯಿ, ಸಂತೋಷ ಭೋಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಇದ್ದರು.