ಧಾರವಾಡ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಗೋಪಾಲ ಬ್ಯಾಕೋಡ ಶುಕ್ರವಾರ ಅಧಿಕಾರ ವಹಿಸಿಕೊಂಡರು. 2021ರ ಐಪಿಎಸ್ ಬ್ಯಾಚ್‌ನ ಡಾ. ಗೋಪಾಲ ಈ ಮೊದಲು ಹು-ಧಾ ಪೊಲೀಸ್ ಕಮೀಷನರೇಟ್‌ನಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿದ್ದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಹುದ್ದೆಗೆ ವರ್ಗಾವಣೆಯಾದ ನಿಕಟಪೂರ್ವ ಎಸ್‌ಪಿ ಲೋಕೇಶ ಜಗಲಾಸರ್, ನೂತನ ಎಸ್‌ಪಿಗೆ ಅಧಿಕಾರ ಹಸ್ತಾಂತರಿದರು.