ಜಿಲ್ಲೆ

ಪ್ರಯೋಗ ಸಿದ್ಧಾಂತಕ್ಕೆ ಶಿವಪ್ರಸಾದ್ ಶ್ರೀಕಾರ ; ಸಿದ್ಧಾರ್ಥ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲಕೃಷ್ಣ.ಪಿ.ಶೆಟ್ಟಿ ಬಣ್ಣನೆ

Tumakuru

ತುಮಕೂರು: ದಿವಂಗತ ಡಾ.ಜಿ.ಶಿವಪ್ರಸಾದ್ ಅವರು ಪ್ರಯೋಗ ಸಿದ್ಧಾಂತಕ್ಕೆ ಶ್ರೀಕಾರ ಹಾಕಿದವರು. ನಿರಂತರ ಪ್ರಯೋಗಗಳಿಂದ ಸಾಧನೆಯ ಮೆಟ್ಟಿಲು ಏರಬಹುದು ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದರು ಎಂದು ಸಿದ್ಧಾರ್ಥ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲಕೃಷ್ಣ.ಪಿ.ಶೆಟ್ಟಿ ಬಣ್ಣಿಸಿದರು.

ನಗರದ ಎಸ್‌ಎಸ್‌ಐಬಿಎಂ ಕಾಲೇಜಿನ ವತಿಯಿಂದ ಸೋಮವಾರ ಆಯೋಜಿಸಿದ್ದ ದಿವಂಗತ ಜಿ.ಶಿವಪ್ರಸಾದ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸತ್ಯನಿಷ್ಠೆ, ದಿಟ್ಟ ನಿರ್ಧಾರ, ಕೆಲಸ ಮಾಡುವವರಿಗೆ ಆದ್ಯತೆ ಎನ್ನುವ ಮೂರು ಮಂತ್ರಗಳನ್ನು ತಿಳಿಸಿಕೊಟ್ಟ ದಿವ್ಯ ಚೇತನ ಎಂದು ಭಾವುಕರಾದರು.

ಧರ್ಮ ಪ್ರಬುದ್ಧತೆ ಹೊಂದಿದ್ದ ಅವರು, ಬೌದ್ಧಧರ್ಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದರು. ಸರಳ ಜೀವನದ ಮುಖೇನ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಸಿದ್ಧಾರ್ಥ ವಿಶ್ವವಿದ್ಯಾಲಯದ ಕುಲಸಚಿವ ಎಂ.ಝಡ್.ಕುರಿಯನ್ ಹೇಳಿದರು.

ಡಾ.ಜಿ. ಶಿವಪ್ರಸಾದ್ ಅವರ ನಡೆ-ನುಡಿಗಳು ನಮಗೆ ಸದಾ ಮಾರ್ಗದರ್ಶಿ ಎಂದು ಎಸ್‌ಎಸ್‌ಐಬಿಎಂ ಪ್ರಾಂಶುಪಾಲ ಡಾ.ಎನ್.ಎಸ್.ರವಿಕುಮಾರ್ ಅಭಿಪ್ರಾಯಪಟ್ಟರು.ಶರಣರ ಸಾಧನೆಯನ್ನು ಮರಣದಲ್ಲಿ ನೋಡು ಎಂಬಂತೆ ಶಿವಪ್ರಸಾದ್ ಅವರ ಸಾಧನೆಯು ಅಡಿಗಡಿಗೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಮಗೆ ಲಭ್ಯವಾಗುತ್ತದೆ. ಅವರ ಜೀವನವೈಖರಿ ನಮಗೆ ಸದಾ ಪ್ರೇರಕ ಎಂದು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ತಿಳಿಸಿದರು.

ಎಸ್‌ಎಸ್‌ಐಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ಕೆ.ವೀರಯ್ಯ, ವಿಜಯವಾಣಿ ಪತ್ರಿಕೆಯ ಸ್ಥಳೀಯ ವ್ಯವಸ್ಥಾಪಕ ಬಿ.ಎ.ಯತೀಶ್‌ಕುಮಾರ್ ಉಪಸ್ಥಿತರಿದ್ದರು. ಚಿನ್ಮಯಿ ಮೋಕ್ಷಗುಂಡಂ ಪ್ರಾರ್ಥಿಸಿದರು. ಡಾ. ಪಾವಗಡ ರೇಣುಕಾ ಪ್ರಸಾದ್ ನಿರೂಪಿಸಿದರು.

ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಎರಡು ವಿದ್ಯಾಸಂಸ್ಥೆಗಳು ಬಹುದೊಡ್ಡ ಕಾಣಿಕೆ ನೀಡಿವೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಒಂದಾದರೆ, ಮತ್ತೊಂದು ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ. ಇವೆರಡರ ಒಡನಾಟ ವಿಶೇಷವಾದದ್ದು. ಡಾ.ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಅಪಾರವಾದ ಗೌರವವನ್ನು ಜಿ.ಶಿವಪ್ರಸಾದ್ ಹೊಂದಿದ್ದರು. ಅವರ ಶಿಕ್ಷಣ ಪ್ರೇಮ ಅವಿಸ್ಮರಣೀಯ. ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರು, ಸಿದ್ದಗಂಗಾಮಠ (ನುಡಿಸಂದೇಶ) ಕಾರ್ಯತತ್ಪರತೆಯಲ್ಲಿ ಜಿ.ಶಿವಪ್ರಸಾದ್ ಅವರಿಗೆ ಸರಿಸಾಟಿ ಯಾರೂ ಇಲ್ಲ. ತಂದೆಯ ಶಿಕ್ಷಣ ಪ್ರೀತಿಯನ್ನು ತಮ್ಮದಾಗಿಸಿಕೊಂಡು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದವರು. ಶಿವಪ್ರಸಾದ್ ಸ್ಥಾವರವಾದರೆ, ಡಾ.ಜಿ.ಪರಮೇಶ್ವರ್ ಜಂಗಮರಾಗಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ದುಡಿದರು. ಸ್ವಾಮಿ ವೀರೇಶಾನಂದ ಸರಸ್ವತಿ ರಾಮಕೃಷ್ಣ ವಿವೇಕಾನಂದ ಆಶ್ರಮ