ಜಿಲ್ಲೆ

ಗುರುಚೇತನ ಪ್ರಶಸ್ತಿಗೆ ಡಾ.ಗಣೇಶ್

ಚಿಕ್ಕಮಗಳೂರು: ದಾವಣಗೆರೆಯ ಶಿಕ್ಷಣ ತಜ್ಞ ಎಚ್.ವಿ.ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ಕೊಡ ಮಾಡಿರುವ ರಾಜ್ಯಮಟ್ಟದ ಗುರು ಚೇತನ ಪ್ರಶಸ್ತಿ ಹಾಗೂ ನಗದು ಪುರಸ್ಕಾರಕ್ಕೆ ಎಂಎಲ್‍ಎಂಎನ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಜಿ.ಎಂ.ಗಣೇಶ್ ಭಾಜನರಾಗಿದ್ದಾರೆ.

ದಾವಣಗೆರೆಯ ಮಾಗನೂರು ಬಸಪ್ಪ ಸಭಾಭವನದಲ್ಲಿ ಫೆ.18 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ದಾವಣಗೆರೆ ಮಹಾವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಕಾರ್ಯಕ್ರಮ ಉದ್ಘಾಟಿಸುವರು. ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ.