ವಿಜಯವಾಣಿ ಸುದ್ದಿಜಾಲ ಗದಗ
12ನೇ ಶತಮಾನದಲ್ಲಿ ವಚನಗಳನ್ನು ಉಳಿಸಲು ಆಗಿರುವ ಹೋರಾಟ ನಮಗೆಲ್ಲರಿಗೂ ಅರಿವಿದೆ. ಅದನ್ನು ನಂತರದ ದಿನಗಳಲ್ಲಿ ಸಂಗ್ರಹಿಸಿ ಸಂರಕ್ಷಣೆ ಮಾಡುವ ಕಾರ್ಯದಲ್ಲಿ .ಗು ಹಳಕಟ್ಟಿಯವರ ಪಾತ್ರ ಬಹು ದೊಡ್ಡದು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ತೋಂಟದ ಕಲ್ಯಾಣ ಕೇಂದ್ರದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾಯ್ರಕಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾವ ವಿಶ್ವವಿದ್ಯಾಲಯಗಳು ಮಾಡಲಾಗದ ಸಾಧನೆಯನ್ನು ಡಾ. ಫ.ಗು. ಹಳಕಟ್ಟಿಯವರು ವಚನ, ಸಾಹಿತ್ಯ ಸಂರಕ್ಷಣೆಯಲ್ಲಿ ಮಾಡಿದ್ದಾರೆ ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇಂತಹ ಮಹನೀಯರ ಜನ್ಮ ದಿನಾಚರಣೆ ಸರ್ಕಾರ ಅರ್ಥರ್ಪೂಣವಾಗಿ ಆಯೋಜಿಸಿದೆ. ಡಾ.ಫ.ಗು. ಹಳಕಟ್ಟಿಯವರ ಸಾರ್ಥಕ ಸಾಧನೆಯನ್ನು ಇಂದಿನ ಯುವಕರಿಗೆ ಹಾಗೂ ಜನಸಾಮಾನ್ಯರಿಗೆ ಅರ್ಥೈಸಬೇಕು. ಶಿಕ್ಷಣ ಸಂಸ್ಥೆಗಳ ಸಹಯೋಗ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಧ್ಯಾಥಿರ್ಗಳಿಗೆ ಮಹಾನಚೇತನಗಳ ಜೀವನ ಸಾಧನೆಯನ್ನು ತಿಳಿಸಿ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆ ಆಗಬೇಕು ಎಂದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ. ರಮೇಶ ಕಲ್ಲನಗೌಡರ ಡಾ. ಫ.ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ ಸಿಇಒ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಉಪವಿಭಾಗಾಧಿಕಾರಿ ಅನ್ನರ್ಪೂಣ ಹಲವರು ಇದ್ದರು.