ಜಿಲ್ಲೆ

ಡಾ.ಫ.ಗು. ಹಳಕಟ್ಟಿ ಸೇವೆ ಸ್ಮರಣೀಯ

ರುದ್ರಪ್ಪ ವಾಲಿ

ಕೊಟ್ಟೂರು: ಅಳವಿನ ಅಂಚಿನಲ್ಲಿದ್ದ 300 ವಚನಗಳನ್ನು ಊರೂರು ಸುತ್ತಿ ಸಂಗ್ರಹಿಸಿದ ಡಾ.ಕೀರಪ್ಪ ಗುರುಬಸಪ್ಪ ಹಳಕಟ್ಟಿ ಹೊರತಂದಿದ್ದರಿಂದ ಅವರನ್ನು ವಚನಗಳ ಪಿತಾಮಹ ಎನ್ನಲಾಗುತ್ತಿದೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ. ಪ್ರತಿಭಾ ಹೇಳಿದರು.

ಪಟ್ಟಣದ ತಹಸಿಲ್‌ಕಚೇರಿಯಲ್ಲಿ ಬುಧವಾರ ಡಾ.ಫ.ಗು. ಹಳಕಟ್ಟಿ ಜನ್ಮ ದಿನಾಚರಣೆ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ವಚನಗಳನ್ನು ಸಂರಕ್ಷಿಸಿ ಉಳಿಸಿದ ಇವರ ಸೇವೆಯನ್ನು ನಾವೆಲ್ಲಾ ಸ್ಮರಿಸಬೇಕಿದೆ ಎಂದರು.