ಜಿಲ್ಲೆ

ರಾಷ್ಟ್ರೀಯ ಐಎಂಎ ವೈದ್ಯರ ಒಲಿಂಪಿಕ್ಸ್  ಶಿರಸಿಯ ಡಾ. ದಿನೇಶ ಹೆಗಡೆಗೆ ಎರಡು ಚಿನ್ನ

ಶಿರಸಿ: ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನ.14ರಿಂದ 17ರವರಗೆ ಏರ್ಪಾಟಾಗಿದ್ದ ರಾಷ್ಟ್ರಮಟ್ಟದ ಐಎಂಎ ಒಲಿಂಪಿಕ್ಸ್​ನಲ್ಲಿ ಶಿರಸಿಯ ಮಕ್ಕಳ ತಜ್ಞ ವೈದ್ಯ ಡಾ. ದಿನೇಶ ಹೆಗಡೆ ಎರಡು ಸ್ವರ್ಣ ಪದಕ ಪಡೆದಿದ್ದಾರೆ.

45 ವರ್ಷ ಮೇಲ್ಪಟ್ಟ ಮತ್ತು 55 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ, ಅನುಕ್ರಮವಾಗಿ ಬ್ಯಾಡ್ಮಿಂಟನ್ ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗಗಳಲ್ಲಿ, ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಈ ಸಾಧನೆಗೈದಿದ್ದಾರೆ.

ದೇಶಾದ್ಯಂತದಿಂದ 250ಕ್ಕೂ ಹೆಚ್ಚು ವೈದ್ಯ ಕ್ರೀಡಾಳುಗಳು ಭಾಗವಹಿಸಿದ್ದರು.