ಮಂಗಳೂರು : ರಾಜ್ಯದಲ್ಲಿ ಡೆಂಗೆ ಜ್ವರ ರೌದ್ರಾವತಾರ ತಾಳಿದ್ದು, ರಾಜ್ಯ ಸರ್ಕಾರ ನಿದ್ದೆಯಲ್ಲಿದೆ. ಡೆಂೆ ಪೀಡಿತರ ಸಂಖ್ಯೆ ಸಮರ್ಪಕವಾಗಿ ವರದಿಯಾಗುತ್ತಿಲ್ಲ. ಡೆoಗೆ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡೆಂಗೆ ಪಾಸಿಟಿವ್ ಪ್ರಕರಣಗಳ ಬಗ್ಗೆ ಆಸ್ಪತ್ರೆಗಳಿಂದ ಆರೋಗ್ಯ ಇಲಾಖೆಗೆ ಸರಿಯಾಗಿ ವರದಿ ರವಾನೆ ಆಗುತ್ತಿಲ್ಲ. ಸರ್ಕಾರ ಡೆಂಗೆ ಪೀಡಿತರ ನಿಖರ ವರದಿ ಪಡೆದು ನಿಯಂತ್ರಣಕ್ಕೆ ತುರ್ತು ಕ್ರಮ ವಹಿಸಬೇಕು
ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಜನವರಿಯಿಂದ ಇದುವರೆ 6300 ಡೆಂಗೆ ಪ್ರಕರಣ ವರದಿಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಡೆಂಗೆಯಿಂದ ಓರ್ವ ವೈದ್ಯ ಸಹಿತ ಏಳು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2211 ಪ್ರಕರಣ ವರದಿಯಾಗಿದೆ. ಆದರೆ, ಪ್ರಸ್ತುತ 500ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ಆಸ್ಪತ್ರೆಯಲ್ಲಿ 50ರಷ್ಟು ಮಂದಿ ಡೆಂಗೆ ಪೀಡಿತರಿದ್ದಾರೆ. ಅನೇಕರು ಗಂಭೀರ ಸ್ಥಿತಿಯಲ್ಲಿದ್ದಾರೆ. ಜನತೆ ಸೊಳ್ಳೆ ಕಡಿತದಿಂದ ದೂರವಿದ್ದು, ಡೆಂಗೆ ಬರದಂತೆ ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ. ವೈ.ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಕಿಶೋರ್‌ಕುಮಾರ್ ಬೊಟ್ಯಾಡಿ, ಕೋಶಾಧಿಕಾರಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.
.......................