ಜಮಖಂಡಿ: ನಗರದ ಹೃದಯರೋಗ ತಜ್ಞ, ನಾಡೋಜ ಡಾ. ಎಚ್.ಜಿ. ದಡ್ಡಿ ಅವರು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಮಾಡಿದ ಹೋರಾಟ ಮತ್ತು ರಚಿಸಿದ ಸಾಹಿತ್ಯ ಪರಿಗಣಿಸಿ ಅವರಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.
ಇತ್ತೀಚೆಗೆ ಜಾನಪದ ವಿಶ್ವವಿದ್ಯಾಲಯದ 8ನೇ ಮತ್ತು 9ನೇ ಘಟಿಕೋತ್ಸವದಲ್ಲಿ ಡಾ. ದಡ್ಡಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಹಿಂದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ- 2005, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ-2014, ಬಿ.ಸಿ. ರಾಯ್ ಪ್ರಶಸ್ತಿ-2018, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ-2020 ಲಭಿಸಿರುವುದನ್ನು ಸ್ಮರಿಸಬಹುದು.