ಜಿಲ್ಲೆ

ಡಾ.ಡಿ.ನಟರಾಜು ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ

ಕೆ.ಆರ್.ನಗರ: ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಹೃದ್ರೋಗ ತಜ್ಞ ಡಾ.ಡಿ.ನಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ರೈತ ಮುಖಂಡ ಡಿ.ಮಧುಸೂದನ್ ಅವಿರೋಧವಾಗಿ ಆಯ್ಕೆಯಾದರು.

ಮಂದಿರ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಾಯಿಬಾಬಾ ಸಮಿತಿಯ ಸರ್ವ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಡಾ.ಡಿ.ನಟರಾಜ್ ಮಾತನಾಡಿ, ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸಲಾಗುವುದು ಎಂದರು.

ಇದಕ್ಕೂ ಮೊದಲು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಶೀನೇಗೌಡ, ಕಾರ್ಯದರ್ಶಿಯಾಗಿ ನಾರಾಯಣ್, ಸಂಘಟನಾ ಕಾರ್ಯದರ್ಶಿಯಾಗಿ ಕಣ್ಣನ್, ಪತ್ರಿಕಾ ಕಾರ್ಯದರ್ಶಿಯಾಗಿ ಎಸ್.ಯೋಗಾನಂದ್, ಗೌರವ ಸಲಹೆಗಾರರಾಗಿ ಎಂ.ಜೆ.ರಮೇಶ್, ಖಜಾಂಚಿಯಾಗಿ ಸುದೇವ್ ಅವರನ್ನು ಆಯ್ಕೆ ಮಾಡಲಾಯಿತು.

ಸಾಯಿಬಾಬಾ ಭಕ್ತರಾದ ಅಡುಗೆ ಕುಮಾರ್, ಹಿರಿಯರಾದ ಪಾರ್ವತಮ್ಮ, ವಕೀಲ ವಸಂತ್‌ಕುಮಾರ್, ಉಪ್ಪಾರ ಸಮಾಜ ಮಾಜಿ ಅಧ್ಯಕ್ಷೆ ವಸಂತಮ್ಮ ಪುಟ್ಟಸ್ವಾಮಿ, ಮುಖಂಡರಾದ ಎನ್.ಯೋಗೇಶ್‌ಕುಮಾರ್, ಸತ್ಯನಾರಾಯಣ್, ಕಲಾವತಿಬಾಯಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್ ಇತರರಿದ್ದರು.