ಜಿಲ್ಲೆ

ಅವಕಾಶ ಸಿಕ್ಕಾಗ ಜನಪರ ಕಾರ್ಯ ಮಾಡಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಧಿಕಾರ ಶಾಶ್ವತವಲ್ಲ. ಅಧಿಕಾರ ಮತ್ತು ಅವಕಾಶ ಸಿಕ್ಕಾಗ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಸೃಜನಾ ರಂಗಮ0ದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ. ಡಿ.ಬಿ. ಕರಡೋಣಿ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾತೃಭಾಷೆಯಲ್ಲಿ ಕಲಿತ ಅನೇಕರು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಕ್ಕೆ ಡಾ. ಕರಡೋಣಿ ನಿದರ್ಶನ. ಅವರು ಸಣ್ಣ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಹುದ್ದೆ ನಿಭಾಯಿಸಿದ್ದು ಸಾಮಾನ್ಯ ವಿಷಯವಲ್ಲ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ಹೆಚ್ಚಾಗುತ್ತಿರುವದು ಆಘಾತಕಾರಿ ಸಂಗತಿ. ಹೆತ್ತವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

`ಕಪ್ಪುನೆಲದ ಸಿರಿ' ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ನಾಡೋಜ ಕುಂ. ವೀರಭದ್ರಪ್ಪ ಮಾತನಾಡಿದರು.

ಡಾ. ಎಂ.ಎ0. ಕಲಬುರಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಶಿಕ್ಷಕರಿಗೆ ವಿದ್ಯಾರ್ಥಿಗಳೇ ಸಂಪತ್ತು. ಅಗಾಧ ವಿದ್ಯಾರ್ಥಿ ಸಂಪತ್ತು ಗಳಿಸಿರುವ ಡಾ. ಕರಡೊಣಿ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಹುದ್ದೆ ಅಲಂಕರಿಸಿದ್ದು ಸೌಭಾಗ್ಯ ಎಂದರು.

ಗೌರವ ಅಭಿನಂದನೆ ಸ್ವೀಕರಿಸಿದ ಡಾ. ಡಿ.ಬಿ. ಕರಡೋಣಿ ಮಾತನಾಡಿ, ಕುಗ್ರಾಮದಿಂದ ಬಂದ ನನಗೆ ಶಾಲೆ- ಕಾಲೇಜು ದಿನಗಳಲ್ಲಿ ಅನೇಕರು ಸಹಾಯ ಮಾಡಿದ್ದಾರೆ. 6 ವರ್ಷಗಳ ಅವಽಯಲ್ಲಿ ಸಹಕಾರ ನೀಡಿದ ಶಿಕ್ಷ- ಶಿಕ್ಷಕೇತರ ಸಿಬ್ಬಂದಿ ಮತ್ತು ಶಿಷ್ಯವರ್ಗಕ್ಕೆ ಅಭಾರಿ ಎಂದರು.

ಮನಸೂರ ರೇವಣಸಿದ್ಧೇಶ್ವರ ಮಠದ ಶ್ರೀ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಡಾ. ರಾಮು ಮೂಲಗಿ ಮತ್ತು ಡಾ. ಮೃತ್ಯುಂಜಯ ಅಗಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸೌಜನ್ಯ ಕರಡೋಣಿ ಅವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಆರ್.ಎಲ್. ಹೈದರಾಬಾದ್, ಗೋಟಗೋಡಿಯ ಜಾನಪದ ವಿಶ್ವವಿದ್ಯಾಲಯ ಕುಲಪತಿ ಟಿ.ಎಂ. ಭಾಸ್ಕರ್, ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ, ಪ್ರೊ. ಲಕ್ಷ÷್ಮ್ಮಣ ತೇಲಗಾವಿ, ಎ-ï.ಎಚ್. ಜಕ್ಕಪ್ಪನವರ, ಡಾ. ಮಹೇಂದ್ರ ಹರಿಹರ, ಡಾ. ಶರಣು ಮುಷ್ಠಿಗೇರಿ, ಡಾ. ಮಹೇಶ ಹುಲೇನ್ನವರ, ಅಭಿನಂದನ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಡಾ. ಕರಡೋಣಿ ಕುಟುಂಬದವರು ಉಪಸ್ಥಿತರಿದ್ದರು.