ತಾಳಿಕೋಟೆಯಲ್ಲಿ ನವರಾತ್ರೋತ್ಸವ ಅಂಗವಾಗಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ದೇವಿ ಮಾತೃಮಂಡಳಿಯ ಸುವರ್ಣಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಡಾ.ಚೆನ್ನವೀರ ದೇವರು, ಪ್ರಭುಗೌಡ ದೇಸಾಯಿ, ಆರ್.ಎಸ್.ಪಾಟೀಲ ಕೂಚಬಾಳ ಇತರರಿದ್ದರು. 
ಜಿಲ್ಲೆ

ತಾಳಿಕೋಟೆಯಲ್ಲಿ ದುರ್ಗಾಮಾತೆ ಆರಾಧನೆ

ತಾಳಿಕೋಟೆ: ನವರಾತ್ರಿ ಹಬ್ಬವನ್ನು ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳೇ ಉತ್ಸಾಹದಿಂದ ಆಚರಿಸಲ್ಪಡುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ದೇವರು ಹೇಳಿದರು.

ಸ್ಥಳೀಯ ಶ್ರೀದೇವಿ ಮಾತೃಮಂಡಳಿ ಹಾಗೂ ಹಿಂದು ಮಹಾ ಗಣಪತಿ ಮಹಾ ಮಂಡಳಿಯಿಂದ ಶನಿವಾರ ಪ್ರತಿಷ್ಠಾಪಿಸಲಾದ ಆದಿದೇವತೆ ದುರ್ಗಾಮಾತೆಯ 3ನೇ ದಿನದ ಪೂಜಾ ಕಾರ್ಯಕ್ರಮದ ಕುರಿತು ಏರ್ಪಡಿಸಿದ್ದ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನಸ್ಸನ್ನು ಸ್ವಚ್ಛಗೊಳಿಸಿ ನೆಮ್ಮದಿಯಿಂದ ಜೀವಿಸಲು ಶರಣರು, ಸಂತರು, ಶ್ರೀಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ದಾನ ಮನೋಭಾವ ಹಾಗೂ ಸದ್ಗುಣ ಹೊಂದಿದವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದರು.

ಹಿಂದು ಮಹಾ ಗಣಪತಿ ಮಹಾ ಮಂಡಳಿ ಗೌರವಾಧ್ಯಕ್ಷ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗೌರವ ಉಪಾಧ್ಯಕ್ಷ ಕೆಸರಟ್ಟಿಯ ಸೋಮಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಶ್ರೀಗಳು ಹಾಗೂ ಅತಿಥಿಗಳು ಹಾಗೂ ವಿಜಯಪುರ ಮಾತೃ ಮಂಡಳಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಗಣ್ಯವ್ಯಾಪಾರಸ್ಥ ಪರಶುರಾಮ ಹಂಚಾಟೆ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ಸುವರ್ಣಾ ಬಿರಾದಾರ, ರಾಘವೆಂದ್ರ ವಿಜಾಪುರ, ಕಾಶಿನಾಥ ಅರಳಿಚಂಡಿ, ವಿಜಯ ಕಲಾಲ್, ಗಜದಂಡಯ್ಯ ಹಿರೇಮಠ, ಯಲ್ಲೇಶ ಧಾಯಪುಲೇ ಇತರರಿದ್ದರು.