ತಾಲೂಕಿನ ಕಗ್ಗಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆಯಲ್ಲಿ ಇಬ್ಬರು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ನರಳಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಕಂಡ ಅದೇ ದಾರಿಯಲ್ಲಿ ಬರುತ್ತಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ ಸಿ ಎನ್ ಮಂಜುನಾಥ್ ರವರು ಕಾರು ನಿಲ್ಲಿಸಿ ಇಳಿದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.
ಬಿದ್ದಿದ್ದ ವ್ಯಕ್ತಿ ಫಿಟ್ಸ್ ರೋಗಿಯಾಗಿದ್ದು ಸಂಸದರು ಸ್ವತಹ ವೈದ್ಯರಾಗಿರುವುದರಿಂದ ಅವನನ್ನು ಅಲ್ಲಿಯೇ ಪರೀಕ್ಷಿಸಿ ನೀವುಗಳು ಬೈಕ್ ನಲ್ಲಿ ಸಂಚರಿಸುವುದು ಸರಿಯಲ್ಲ ಕಣ್ಣಿನ ದೃಷ್ಟಿಯು ಮಂಜಾಗಿದೆ ಎಂದು ಅವರಿಗೆ ಸಮಾಧಾನ ಹೇಳಿ ಸಂತೈಸಿ ಹಾರೋಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಿದ್ದಾರೆ.
ಸಂಸದರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಶ್ಲಾಘಿಸಿದ್ದಾರೆ. ಜೊತೆಯಲ್ಲಿ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಂ ಗೌತಮ್ ಗೌಡ ಇದ್ದರು