ರಾಯಚೂರು ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮುದಾಯದ ಧನಿಯಾಗಿದ್ದರು. ಅವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಕೆಲಸಗಳು ನಮ್ಮೆಲ್ಲರಿಗೂ ಆದರ್ಶ. ನಾವೆಲ್ಲ ಸ್ವಾತಂತ್ರ÷್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿಹಿಡಿಯಬೇಕೆಂದು ಸಂಸದ ಜಿ.ಕುಮಾರ ನಾಯಕ ಅವರು ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರï.ಅಂಬೇಡ್ಕರï ರವರ ೧೩೪ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಬೇಡ್ಕರ್ ಅಸ್ಪÈಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಮಾನವತಾವಾದಿ. ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಬೇಕಾದರೆ ನಾವೆಲ್ಲ ಅವರ ಆದರ್ಶಗಳನ್ನು ಪಾಲಿಸಬೇಕು. ಜೊತೆಗೆ ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅಂಬೇಡ್ಕರ್ ಕಂಡ ಪ್ರಜÁಪ್ರಭುತ್ವದ ಕನಸು ನನಸಾಗಿಸಲು ಸಾಧ್ಯ ಎಂದರು.
ಲೋಕಸಭೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದವರು ಮಾತಿನ ವಾಕ್ಸಮರಕ್ಕೆ ಇಳಿದು ಸಂವಿಧಾನದ ಬಗ್ಗೆ ತಿಳಿಸಲು ಮುಂದಾಗುತ್ತಾರೆ. ಆದರೆ ಲೋಕಸಭೆಯಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ. ಯಾರೂ ಕೂಡ ದೇಶದ್ರೋಹಿಗಳಲ್ಲ ಎಂದು ಹೇಳಿದರು.
ಜಿ¯್ಲÁಽಕಾರಿ ನಿತೀಶ್.ಕೆ ಮಾತನಾಡಿ, ಭಾರತದ ಪ್ರಜೆಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್ ಅವರಾಗಿದ್ದು, ಒಂದು ವೇಳೆ ಅಂಬೇಡ್ಕರï ಅವರು ದೂರ ದೃಷ್ಠಿಕೋನದಿಂದ ಸಂವಿಧಾನ ನೀಡದೇ ಹೋಗಿದ್ದರೆ ಇಂದು ಭಾರತದ ಪರಿಸ್ಥಿತಿ ಪಾಕಿಸ್ತಾನದಂತಾಗುತ್ತಿತ್ತು ಎಂದರು. ಸಾಕಷ್ಟು ಮುಂದುವರೆದ ದೇಶಗಳಲ್ಲಿ ಈಗಲೂ ಅಸಮಾನತೆ ಕಂಡರೆ ಅಂಬೇಡ್ಕರï ಅವರ ಸಂವಿಧಾನವನ್ನು ನೆನಪಿಸಿಕೊಳ್ಳಲಾಗುತ್ತದೆ.
ಅಷ್ಟು ಸಮೃದ್ಧವಾದ ಸಂವಿಧಾನವನ್ನು ದೇಶಕ್ಕೆ ಬಾಬಾಸಾಹೇಬರು ನೀಡಿz್ದÁರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ, ಉತ್ತಮ ಪ್ರಜೆಗಳಾಗಲು ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಮಾತನಾಡಿ, ಡಾ.ಬಿ.ಆರï.ಅಂಬೇಡ್ಕರï ಅವರು ಎ¯್ಲÁ ಕ್ಷೇತ್ರದಲ್ಲಿಯೂ ಪರಿಣಿತರಾಗಿದ್ದರು. ಇದೇ ಕಾರಣದಿಂದ ಪ್ರತಿಯೊಬ್ಬರಿಗೂ ಸಮಾನತೆ ಸಿಗಲಿ ಎಂದು ಉತ್ತಮ ಸಂವಿಧಾನವನ್ನು ನೀಡಿz್ದÁರೆ ಎಂದು ಹೇಳಿದರು.
ಆದಿಕವಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ.ಶರಣಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮುಂಚೆ ನಗರದ ಡಾ.ಬಿ.ಆರ್.ಅಂಬೇಡ್ಕರï ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರï ಪುತ್ಥಳಿಗೆ ಸಣ್ಣ ನೀರಾವರಿ ಸಚಿವರಾದ ಎನï.ಎಸï.ಭೋಸರಾಜು, ಶಾಸಕರಾದ ಬಸನಗೌಡ ದದ್ದಲï,ಡಾ.ಶಿವರಾಜ ಎಸ್. ಪಾಟೀಲï, ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾಽಕಾರಿ ನಿತೀಶ ಕೆ., ಸಿಇಒ ರಾಹುಲ್ ತುಕುರಾಂ ಪಾಂಡ್ವೆ, ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ, ಎಸ್ಪಿ ಎಂ.ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದಪ್ಪ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ಮಾಡಗಿರಿ, ಎಸ್ಪಿ ಎಂ.ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ರಾಜೇಂದ್ರ ಜಲ್ದಾರï, ತಾಪಂ ಇಒ ಚಂದ್ರಶೇಖರ ಪವಾರï, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಲಕ್ಷೀ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿ¯್ಲÁ ಅಽಕಾರಿ ಸಂಗಮೇಶ್ವರ ಸೇರಿದಂತೆ ಇನ್ನಿತರರು ಇದ್ದರು.