ಗುರುಪುರ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ಆಡಳಿತ ಯಂತ್ರದ ವೈಫಲ್ಯ ಎದ್ದು ಕಾಣುತ್ತದೆ. ಪ್ರತಿಪಕ್ಷ ನಾಯಕರು, ಬಿಜೆಪಿ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್‌ಐಆರ್ ಆಗುತ್ತಿದೆ. ಆದರೆ ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ ಎಫ್‌ಐಆರ್ ಆಗುತ್ತಿಲ್ಲ. ರಾಜ್ಯದಲ್ಲಿ ಇಬ್ಬಗೆಯ ನೀತಿ ಯಾಕೆ ? ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಸಿ.ಟಿ. ರವಿ ಕೊಟ್ಟ ದೂರಿನ ಎಫ್‌ಐಆರ್ ಮಾಡಿಲ್ಲ. ಎಫ್‌ಐಆರ್ ವಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿ, ಅವಾನವೀಯವಾಗಿ ನಡೆದುಕೊಳ್ಳಲಾಗಿದೆ. ಸಚಿನ್ ಟನೆಯಲ್ಲೂ ನ್ಯಾಯಾಂಗ ಆದೇಶ ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸರ್ಕಾರ ಕಾನೂನಿಗೆ ಬೆಲೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು 100 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ಗುತ್ತಿಗೆದಾರ ಸಚಿನ್ ಅವರಿಗೂ ಕಿರುಕುಳ ನೀಡಿದ್ದರಿಂದ ಸಾವು ಸಂಭವಿಸಿದೆ. ಈ ಸಾವಿನ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ನಿಷ್ಪಕ್ಷಪಾತ ತನಿಖೆ ಸಲುವಾಗಿ ಪ್ರಿಯಾಂಕ ಖರ್ಗೆ ಮೊದಲು ರಾಜೀನಾಮೆ ನೀಡಬೇಕು. ಕೆ.ಎಸ್. ಈಶ್ವರಪ್ಪ ಅವರು ಆರೋಪ ಬಂದಾಗ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಅಂತಹ ನೈತಿಕತೆ ಕಾಂಗ್ರೆಸ್‌ನ ಮುಖಂಡರು ಕಲಿತುಕೊಳ್ಳಬೇಕಿದೆ. ಖರ್ಗೆ ರಾಜೀನಾಮೆ ನೀಡುವವರೆಗೆ ಹಾಗೂ ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿಹೋರಾಟ ನಡೆಸಲಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.