ಜಿಲ್ಲೆ

ಜಗಜೀವನ್ ರಾಮ್ ಆದರ್ಶ ಪಾಲನೆ : ವಿಠ್ಠಲ್ ಎನ್.ಎಂ. ಕರೆ

ಸೌಮ್ಯ ಆರ್

ಮೂಲ್ಕಿ: ಬಾಬೂಜಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಡಾ.ಬಾಬು ಜಗಜೀವನ್ ರಾಮ್ ಸ್ವಾತಂತ್ರೃ ಹೋರಾಟಗಾರರಾಗಿ, ಧೀಮಂತ ರಾಜಕಾರಣಿಯಾಗಿ ಬಡವ, ಶೋಷಿತರ ಹಕ್ಕುಗಳಿಗಾಗಿ ಬಹಳಷ್ಟು ಶ್ರಮಿಸಿದ್ದರು. ಅವರ ಆದರ್ಶ ಇಂದಿನ ಯುವ ಜನಾಂಗ ಪಾಲಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಠ್ಠಲ್ ಎನ್.ಎಂ. ಹೇಳಿದರು.

ಮೂಲ್ಕಿಯ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡಿನ ಶ್ರೀ ಚನ್ನಮಲ್ಲಿಕಾರ್ಜುನ ಮಠದ ಬಳಿ ಆಯೋಜಿಸಲಾದ ಡಾ.ಬಾಬು ಜಗಜೀವನ್ ರಾಮ್ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿವಾನಂದ ಆರ್.ಕೆ, ಭೀಮಶಂಕರ್ ಆರ್.ಕೆ, ಮಾಬು ಕುಮಾರ್, ಸಿದ್ದು ಎಚ್.ಪಿ, ಪಾಂಡುರಂಗ ಹೊಸಮನಿ, ಉಮೇಶ್ ಎಚ್, ದೇವಿಪ್ರಸಾದ್ ಅಲ್ಲಪುರ್, ಭೀಮಶಂಕರ್ ಬಗಲೂರು, ಅಡಿವಪ್ಪ ಹಾದಿಮನಿ, ವಿಶ್ವನಾಥ್ ತಿರುಪತಿ ಮತ್ತಿತರರು ಉಪಸ್ಥಿತರಿದ್ದರು.