ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ರೀಸರ್ಚ್ ಇನ್ ಸ್ಟಿಟ್ಯೂಟ್ (ಕೆಸಿಟಿಆರ್ ಐ) ಚೇರ್ಮನ್ ಡಾ. ಬಿ.ಆರ್. ಪಾಟೀಲ ಅವರಿಗೆ ಇಂಗ್ಲಂಡ್‌ನ ಪ್ರತಿಷ್ಠಿತ ಫೆಲೋಶಿಪ್ ಪ್ರದಾನ ಮಾಡಲಾಗಿದೆ.
ಯುನೈಟೆಡ್ ಕಿಂಗ್ ಡಮ್ ಗ್ಲಾಸ್ಗೋದ ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ಸ್ ಹಾಗೂ ಸರ್ಜನ್ಸ್ ನಿಂದ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರತಿಷ್ಠಿತ ಫೆಲೋಶಿಪ್ ನೀಡಲಾಗಿದೆ.
ಡಾ. ಬಿ.ಆರ್. ಪಾಟೀಲ ಅವರ ವಿಶೇಷ ಪರಿಣತಿ, ದೂರದೃಷ್ಟಿಯ ನಾಯಕತ್ವ, ಶಸ್ತ್ರಚಿಕಿತ್ಸೆ ವಿಜ್ಞಾನ ಬೆಳವಣಿಗೆಗೆ ನಿರಂತರ ಪರಿಶ್ರಮ ವಹಿಸುತ್ತಿರುವುದು ಇತ್ಯಾದಿ ಕಾರಣಗಳಿಗೆ ಇಂತಹ ಅತ್ಯುನ್ನತ ಗೌರವ ಅರಸಿ ಬಂದಿದೆ ಎಂದು ಕ್ಯಾನ್ಸರ್ ಆಸ್ಪತ್ರೆಯ ಆಡಳಿತ ಮಂಡಳಿ, ಸಿಬ್ಬಂದಿ ಅಭಿನಂದಿಸಿದ್ದಾರೆ.