ಜಿಲ್ಲೆ

ಡಾ.ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ

ವಿಜಯಪುರ: ಡಾ.ಅಂಬೇಡ್ಕರ್‌ರ ನಿವಾಸದ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ದಲಿತ ಮತ್ತು ಮೈನಾರಿಟೀಸ್ ಸೇನೆಯ ನಗರ ಘಟಕದಿಂದ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ನಗರ ಘಟಕದ ಅಧ್ಯಕ್ಷ ಶಶಿಕುಮಾರ ಸಂಕದ ಮಾತನಾಡಿ, ಮುಂಬೈನ ದಾದರ್ ಪ್ರದೇಶದಲ್ಲಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ರಾಜಗೃಹ ಬಂಗಲೆ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಸಂಘಟನೆ ಕಾರ್ಯದರ್ಶಿ ಮೊಸೀನ್ ಇನಾಮದಾರ್, ಹಮೀದ್ ಇನಾಮದಾರ್, ಪ್ರೇಮ ಚಲವಾದಿ, ಮಂಜುನಾಥ ಕಟ್ಟಿಮನಿ, ರಫೀಕ್ ಹಿಟ್ನಳ್ಳಿ, ಅಮೀರ್ ಫೈರೋಜಾಬಾದ್, ಸತೀಶ ರಾಠೋಡ ಇನ್ನಿತರರು ಇದ್ದರು.