ಮಂಡ್ಯ: ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನವನ್ನು ರಚಿಸಿದ ಹೆಗ್ಗಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಬಣ್ಣಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ನಗರದ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ಅಭ್ಯುದಯಕ್ಕೆ ಕಾರಣರಾದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯುವುದು ಪುಣ್ಯದ ಕೆಲಸ ಎಂದರು.
ಶಿಕ್ಷಣ ಮತ್ತು ಸಂಘಟನೆ ಮೂಲಕ ಜನರ ಬದುಕಿಗೆ ಹೊಸ ಮಾರ್ಗವನ್ನು ಸಂವಿಧಾನಾತ್ಮಕವಾಗಿ ನೀಡಿದರು. ಈ ಮೂಲಕ ಸಮಗ್ರ ಬಡವರ ಏಳಿಗೆಗೆ ಕಾರಣವಾದ ಅಂಬೇಡ್ಕರ್ ಅವರ ಚಿಂತನೆ, ಮಾರ್ಗದರ್ಶನ, ಜ್ಞಾನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ವಿಶ್ವ ಜ್ಞಾನಿಯಾದ ಅಂಬೇಡ್ಕರ್ ಅವರ ದೂರದೃಷ್ಟಿ ದೇಶವನ್ನು ನವ ಭಾರತವಾಗಿ ಸೃಷ್ಟಿಸಲು, ಇಡೀ ವಿಶ್ವಕ್ಕೆ ಮಾದರಿಯಾದ ರಾಷ್ಟ್ರವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಸಂವಿಧಾನದ ಬೆಳವಣಿಗೆ ಮಹತ್ವವಾದ ಪರಿಣಾಮ ಬೀರಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆ ನೀಡಿದ ಸಂವಿಧಾನವು ಸಮಾಜದ ಶಾಂತಿ, ನೆಮ್ಮದಿಗೆ ಕಾರಣವಾಗಿದೆ. ಸರ್ವರ ಸಮಾನತೆಗೆ ಒತ್ತು ನೀಡಿ ದೇಶದ ಪ್ರಮುಖ ಶಕ್ತಿಯಾಗಿದೆ. ಮೀಸಲಾತಿ ನೀಡಿದ್ದರಿಂದ ಸಮಾಜದ ಎಲ್ಲ್ಲ ವರ್ಗಗಳಿಗೂ ಅವಕಾಶ ದೊರಕುವಂತಾಗಿದೆ. ಮೇಲು ಕೀಳುಗಳಿಲ್ಲದೆ ಸಮಾನತೆ ಕಾಣುವಂತಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ಮಂಡಲದ ಅಧ್ಯಕ್ಷ ಪೀಹಳ್ಳಿ ರಮೇಶ್, ಮಾಯಿಗಣ್ಣ, ಸಂಜು, ರಾಮಚಂದ್ರು, ಬೇವಿನಹಳ್ಳಿ ಮಹೇಶ್, ರಮೇಶ್, ಸತೀಶ್, ನಂದೀಶ್, ಪ್ರಮೋದ್, ವೈರಮುಡಿ, ಮಹದೇವಸ್ವಾಮಿ, ಗೌಡಪ್ಪ, ನಟೇಶ್, ವಕೀಲ ನಾಗರಾಜು, ಶ್ರೀಧರ್, ಗೋಪಾಲ್, ನಿರಂಜನ್, ಆನಂದ, ಸಂತೋಷ್, ಜವರೇಗೌಡ, ದರ್ಶನ್, ಉಮೇಶ್ ಇದ್ದರು.