ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಭಾರತೀಯ ವೈದ್ಯಕಿಯ ಕರ್ನಾಟಕ ರಾಜ್ಯ ಸಂಸ್ಥೆಯ ಸಮಾವೇಶದಲ್ಲಿ ಭಾರತೀಯ ವೈದ್ಯಕಿಯ ಸಂಘ ಮಂಗಳೂರು ಶಾಖೆಯ ಕಾರ್ಯಾದರ್ಶಿ ಡಾ. ಅವೀನ್ ಆಳ್ವಾ ಅವರಿಗೆ ಶ್ರೇಷ್ಠ ಕಾರ್ಯಾದರ್ಶಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲೆ

ಡಾ. ಅವೀನ್ ಆಳ್ವಾ ಅವರಿಗೆ ರಾಜ್ಯ ಮಟ್ಟದ ಶ್ರೇಷ್ಠ ಕಾರ್ಯಾದರ್ಶಿ ಪ್ರಶಸ್ತಿ

Mangaluru - Shravan Kumar Nala

ಮಂಗಳೂರು: ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಭಾರತೀಯ ವೈದ್ಯಕಿಯ ಕರ್ನಾಟಕ ರಾಜ್ಯ ಸಂಸ್ಥೆಯ 90ನೆ ವಾರ್ಷಿಕ ರಾಜ್ಯ ಮಟ್ಟದ ಮೆಡಿಕಾನ್-2024 ಸಮಾವೇಶದಲ್ಲಿ ಭಾರತೀಯ ವೈದ್ಯಕಿಯ ಸಂಘ ಮಂಗಳೂರು ಶಾಖೆಯ ಕಾರ್ಯಾದರ್ಶಿ ಡಾ. ಅವೀನ್ ಆಳ್ವಾ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಕಾರ್ಯಾದರ್ಶಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 1200 ವೈದ್ಯಕೀಯ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದರು. ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಕೆ. ರಮೇಶ್ ಸಮಾವೇಶ ಉದ್ಘಾಟಿಸಿದರು. ಸಂಘದ ರಾಜ್ಯಾದ್ಯಕ್ಷ ಡಾ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ.ಶಂಕರ ನಾರಾಯಣ್, ರಾಜ್ಯ ಕಾರ್ಯದರ್ಶಿ ಡಾ. ವಿ.ಪಿ ಕರುಣಾಕರ್ ಭಾರತೀಯ ವೈದ್ಯಕೀಯ ಸಂಘದ ಚುನಾಯಿತ ರಾಷ್ಟ್ರೀಯ ಅಧ್ಯಕ್ಷ ಡಾ. ದಿಲೀಪ್ ಭಾನುಶಾಲಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಶಾಖೆಯ ಕಾರ್ಯದರ್ಶಿ ಡಾ. ಮೋಹನ್ ಕುಮಾರ್ ಮತ್ತು ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ ಉಪಸ್ಥಿತರುದ್ದರು.