ಜಿಲ್ಲೆ

ಡಾ. ಅಸ್ಪಕ್ ಅಹ್ಮದ್ ಗೆ ಅನ್ಮೊಲ್ ರತ್ನ ಪ್ರಶಸ್ತಿ

ಬಾಬುರಾವ ಯಡ್ರಾಮಿ

ಕಲಬುರಗಿ: ನಗರದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ ೧೦ನೇ ವರ್ಷದ "ಜಶ್ನ್ - ಎ ರಹಮತುಲ್-ಲಿಲ್ ಅಲಮೀನ್" ಆಚರಣೆಯಲ್ಲಿ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆಗೈದ ಗ್ಲೋಬಲ್ ಆಸ್ಪತ್ರೆಯ ವೈದ್ಯರಾದ ಡಾ. ಅಸ್ಪಕ್ ಅಹ್ಮದ್ ಗೆ ಅನ್ಮೊಲ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ಸುಮಾರು ವರ್ಷಗಳಿಂದ ಕಲಬುರಗಿಯ ಸಾಥ್ ಗುಂಬಜ್ ರಸ್ತೆಯ ಗ್ಲೋಬಲ್ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಡವರ ಸೇವೆಯಲ್ಲಿ ತೊಡಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಗ್ಯಾಟ್ರ‍್ಯೋ ಎಂಟ್ರಿಲಜಿಸ್ಟ್ ಎನ್ನುವ ಹೆಗ್ಗಳಿಕೆಗೆ ಡಾ. ಅಸ್ಪಾಕ್ ಅಹ್ಮದ್ ಪಾತ್ರರಾಗಿದ್ದಾರೆ.

ನ್ಯಾಷನಲ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಸಜ್ಜಾದ ನಶೀನ್ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ, ಕ್ರೈಸ್ತ ಧರ್ಮಗುರು ಬಿಷಪ್ ಮಿರಾಂಡಾ, ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ಎಸ್ ದೇಶಮುಖ್, ಗುರುದ್ವಾರ ಗುರುನಾನಕ ಮುಖ್ಯಸ್ಥ ಭಾಯ್ ದೀಪ ಸಿಂಘ, ನಿವೃತ್ತ ಕಮಿಷನರ ಎಕ್ಸಸ್ ವಿಭಾಗ ಅಸದ್ ಅಲಿ ಅನ್ಸಾರಿ ಆಗಮಿಸಿದ್ದರು. ಖಾಜಿ ರಿಜ್ವಾನೂರ್ ರೆಹಮಾನ್ ಮಶ್ಹೂದ್ ಅವರ ಅಧ್ಯಕ್ಷತೆ ವಹಿಸಿದ್ದರು. ಡಾ. ಅಥರ್ ಮೊಯಿಜ್ ಅವರು ಪ್ರಶಸ್ತಿಯ ಉಲ್ಲೇಖವನ್ನು, ಫೌಂಡೇಶನ್ ಚಟುವಟಿಕೆಗಳ ಕುರಿತು ವರದಿಯನ್ನು ಕಾರ್ಯದರ್ಶಿ ಅಲ್ಲಾವುದ್ದೀನ್ ಮುಹಮ್ಮದ್ ಅಕ್ಬರ್ ಮಂಡಿಸಿದರು. ಖಾಝಿ ರಿಝ್ವಾನುರ್ ರಹ್ಮಾನ್ ಮಶ್ಹೂದ್ ಅವರು ಸ್ವಾಗತಿಸಿದರೆ, ಮುಹಮ್ಮದ್ ಯೂಸುಫ್ ಸರ್ಮಸ್ತ್ ಅವರು ನಿರೂಪಿಸಿದರು.