ದೇವದುರ್ಗದ ಡಾ.ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಎಇಇ ವೆಂಕಟೇಶ ಗಲಗ ಅವರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರ ಜತೆ ಚರ್ಚಿಸಿದರು. ುುಖಂಡರಾದ ನಾಗರಾಜ ಶಾವಂತಗೇರಾ, ನಾಗರಾಜ ವಾರದ್, ಶಾಮ್ಯಸುಂದರ್, ಬಸವರಾಜ ನಾಗರಾಳ, ಸಿ.ರಮೇಶ, ರಮೇಶ ಗಬ್ಬೂರು, ರಾಮಣ್ಣ ನಾಯಕ ಇತರರಿದ್ದರು. 
ಜಿಲ್ಲೆ

ಡಾ.ಅಂಬೇಡ್ಕರ್ ವೃತ್ತ ಕಾಮಗಾರಿ ವಿಳಂಬಕ್ಕೆ ಆಕ್ರೋಶ

ನರೇಶ್ ಕುಮಾರ್

ದೇವದುರ್ಗ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಅಭಿವೃದ್ಧಿ ಕಾಮಗಾರಿ ಆಮೆಗತಿ ಖಂಡಿಸಿ ವೃತ್ತದ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಎರಡು ವರ್ಷವಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಆಮೆಗತಿಯಲ್ಲಿ ಕೆಲಸ ಸಾಗಿದ್ದು ಕಳಪೆಯಾಗಿ ಮಾಡಲಾಗುತ್ತಿದೆ. ಕಾಮಗಾರಿ ಗುಣಮಟ್ಟ ಹಾಗೂ ವಿಳಂಬ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ದೇಶಕ್ಕೆ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ವೃತ್ತ ಕಾಮಗಾರಿ ವಿಳಂಬ ಮಾಡಿರುವುದು ಖಂಡನೀಯ. ಕೂಡಲೇ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಕೈಗೊಂಡು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಲೋಕೋಪಯೋಗಿ ಎಇಇ ವೆಂಕಟೇಶ ಗಲಗ ಭೇಟಿ ನೀಡಿ ಹೋರಾಟಗಾರರ ಜತೆ ಮಾತುಕತೆ ನಡೆಸಿದರು. ಕಾಮಗಾರಿ ವಿಳಂಬ ಮಾಡಿದ ಜೆಇಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.

ಮುಖಂಡರಾದ ನಾಗರಾಜ ಶಾವಂತಗೇರಾ, ನಾಗರಾಜ ವಾರದ್, ಶಾಮ್ಯಸುಂದರ್, ಬಸವರಾಜ ನಾಗರಾಳ, ಸಿ.ರಮೇಶ, ರಮೇಶ ಗಬ್ಬೂರು, ರಾಮಣ್ಣ ನಾಯಕ, ಭೀಮರೆಡ್ಡಿ ಮಲದಕಲ್, ಚಂದ್ರಶೇಖರ ಛಲವಾದಿ, ಮಲ್ಲಿಕಾರ್ಜನ್, ಗುಂಡಪ್ಪ ನಾಯಕ ಇತರರಿದ್ದರು.