ಜಿಲ್ಲೆ

ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದ ಗಂಡ-ಅತ್ತೆ!

arunakunigal

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಲೆಕ್ಕವಿಲ್ಲದಷ್ಟು ಸಾವು-ನೋವು ಉಂಟಾಗಿದೆ. ಇಂತಹದ್ದೇ ಮತ್ತೊಂದು ಪ್ರಕರಣ ಮರುಕಳಿಸಿದ್ದು, ಹೆಣ್ಣೆತ್ತ ಪೋಷಕರು ಮಾತ್ರವಲ್ಲ, ಇತರರನ್ನೂ ಬೆಚ್ಚಿಬೀಳಿಸಿದೆ ಈ ಭಯಾನಕ ಘಟನೆ.

ಇಲ್ಲೊಬ್ಬ ಕಿರಾತಕ ಸೈಟ್ ಕೊಡಿಸಲಿಲ್ಲವೆಂದು ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾನೆ! ಈ ಅಮಾನವೀಯ ಕೃತ್ಯ ಬೆಂಗಳೂರಿನ ಟಿಸಿ ಪಾಳ್ಯ ಬಳಿ ಸಂಭವಿಸಿದ್ದು, ಸುಟ್ಟ ಗಾಯಗಳಿಂದ ನರಳುತ್ತಿರುವ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಆರೋಪಿ ಹೆಸರು ಸೂರಜ್ ಸಿಂಗ್. ಕಳೆದ ವರ್ಷ ಚಾಂದಿನಿ ಎಂಬಾಕೆಯನ್ನು ಮದುವೆಯಾಗಿದ್ದ ಈತ, ವರದಕ್ಷಿಣೆಗೆ ದುಂಬಾಲು ಬಿದ್ದಿದ್ದ ಎಂಬ ಆರೋಪ ಕೇಳಿಬಂದಿದೆ.

ಚಾಂದಿನಿಯ ತಂದೆ ಮಹೇಂದ್ರ ಸಿಂಗ್ ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಮಗಳ ಮದುವೆಯನ್ನು ಸೂರಜ್​ ಸಿಂಗ್​ ಜತೆ ಮಾಡಿದ್ದರು. ಮದುವೆ ಬಳಿಕ ಪದೆಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಸೂರಜ್, ಸೈಟ್​ಗಾಗಿ ಡಿಮಾಂಡ್​ ಮಾಡಿದ್ದ. ಇದೇ ವಿಚಾರವಾಗಿ ಚಾಂದಿನಿ ಜತೆ ಬುಧವಾರ ಪತಿ ಹಾಗೂ ಅತ್ತೆ ಗಲಾಟೆ ಮಾಡಿದ್ದರು. ಈ ವೇಳೆ ಕುಪಿತಗೊಂಡ ಅವರು ಚಾಂದಿನಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ರಾಮೂರ್ತಿ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ತಂದೆ ಮಹೇಂದ್ರ ಸಿಂಗ್​ ಕೇಸ್​ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿರುವ ಚಾಂದಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.