ಶ್ರೀನಿವಾಸಪುರ: ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅನೇಕ ಸೌಲಭ್ಯಗಳನ್ನು ನೀಡಿದೆ. ಆದರೆ, ಸ್ಥಳಿಯ ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ವಿದ್ಯಾರ್ಥಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ರಾಜ್ಯ ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪದವಿ ಕಾಲೇಜಿಗೆ ಭಾನುವಾರ ಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದ ಅವರ, ಪದವಿ ಕಾಲೇಜಿಗೆ ಭೇಟಿ ನೀಡಿದಾಗ ವಸತಿ ನಿಲಯವು ದನಗಳ, ಹಂದಿಗಳ ದೊಡ್ಡಿಯಂತಿದೆ. ರಾಜ್ಯದಲ್ಲಿಯೇ ಈ ವಸತಿ ನಿಲಯ ಅತೀ ಕೆಟ್ಟದಾಗಿದೆ. ಇದೊಂದು ಅವವ್ಯಸ್ಥೆ ಗೂಡಾಗಿದೆ ಎಂದು ಕಿಡಿಕಾರಿದರು.
ವಸತಿ ನಿಲಯದ ಗೇಟು ದುರಸ್ತಿಗೆ ಬಂದಿರುವುದು, ಒಳಾಂಗಣದಲ್ಲಿ ಕಸ ತುಂಬಿರುವುದನ್ನು ಕಂಡು ಕೆಂಡಾಮಂಡಲರಾದರು.
ವಿದ್ಯಾರ್ಥಿಗಳೊಂದಿಗೆ ಮಾಹಿತಿ ಪಡೆದ ಉಪಲೋಕಾಯುಕ್ತರು, ಶುದ್ಧವಾದ ಕುಡಿಯುವ ನೀರು, ಆಹಾರ ಪದಾರ್ಥ, ವಿದ್ಯುತ್ ಕೈ ಕೊಟ್ಟರೆ ಪರ್ಯಾಯ ಬೆಳಕಿನ ವ್ಯವಸ್ಥೆ ಇಲ್ಲ. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೀಡುವ ಅನುದಾನಗಳೆಲ್ಲ ಅಧಿಕಾರಿಗಳ ಜೇಬು ಸೇರುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ವಸತಿ ನಿಲಯದಲ್ಲಿ ಹಾಜರಾತಿ ಪುಸ್ತಕವಿಲ್ಲ, ಸರಿಯಾದ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಇರುವುದನ್ನು ಗಮನಿಸಿ ವಸತಿ ನಿಲಯಕ್ಕೆ ಯಾವುದೇ ಸೌಲಭ್ಯಗಳು ಸಮಂಜಸವಾಗಿಲ್ಲ ಅಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸುವ ಎಚ್ಚರಿಸಿದರು.
ಜಿಲ್ಲಾ ಲೋಕಾಯುಕ್ತ ಎಸ್ಪಿ ಧನಂಜಯ್, ಡಿವೈಎಸ್ಪಿ ಸೂರ್ಯನಾರಾಯಣ, ಲೋಕಾಯುಕ್ತ ಪಿಎಸ್ಐ ಆಂಜನಪ್ಪ, ಪಿಎಸ್ಐ ಜಯರಾಮ್, ಸಿಬ್ಬಂದಿ ರಾಜಗೋಪಾಲ್, ಎಜಾಜ್ಪಾಷಾ, ಶ್ರೀನಿವಾಸ್, ರಮೇಶ್ , ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ.ಗೌಸಿಯಾ ಬಾನು ಇದ್ದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ
ತಾಲೂಕಿನ ಚಲ್ದಿಗಾನಹಳ್ಳಿ ಸಮೀಪದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ವಸತಿನಿಲಯಕ್ಕೆ ರಸ್ತೆ ನಿರ್ಮಿಸುವಂತೆ ಬೇಡಿಕೆ ಇಟ್ಟು. ಸ್ಥಳದಲ್ಲೇ ಇದ್ದ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ವಸತಿ ನಿಲಯಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ತಿಳಿಸಿದರು. ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪದವಿಪೂರ್ವ ಕಾಲೇಜು ವಸತಿ ನಿಲಯ, ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿ, ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ವಸತಿ ನಿಲಯಗಳಿಗೆ ಭೇಟಿ ನೀಡುವಂತೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗೂ ಭೇಟಿ:
ಕಳೆದ ಎರಡು ವರ್ಷಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದಾಗ ರಾಜ್ಯದಲ್ಲಿಯೇ ಉತ್ತಮವಾಗಿ ಕಾರ್ಯಮಿರ್ವಹಿಸುವ ಆಸ್ಪತ್ರೆ ಆಗಿತ್ತು. ಆದರೆ, ಈಗ ಅವವ್ಯಸ್ಥೆಗಳಿಂದ ಕೂಡಿದ್ದು, ಮತ್ತೆ ಹಿಂದಿನ ರೀತಿಯಲ್ಲೇ ಕಾರ್ಯನಿರ್ವಹಿಸಿದಂತೆ ಈಗಲೂ ಸೇವೆ ಸಿದ್ಧವಾಗಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದರು. ಅವಧಿ ಮುಗಿದ ಔಷಧಗಳನ್ನು ರೋಗಿಗಳಿಗೆ ಕೊಡಕೂಡದು. ರೋಗಿಗಳು ಆಸ್ಪತ್ರೆಗೆ ಬರುವುದು ರೋಗ ವಾಸಿ ಮಾಡಿಕೊಳ್ಳಲು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಅವರೊಂದಿಗೆ ಪ್ರೀತಿಯಿಂದ ಮಾತನಾಡಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.