ದೋರನಹಳ್ಳಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಉಪ ತಹಸೀಲ್ದಾರ್ ನಾಡಕಚೇರಿ ಕಟ್ಟಡ. 
ಜಿಲ್ಲೆ

ಉಪ ತಹಸೀಲ್ದಾರ್ ಕಚೇರಿ ಲೋಕಾರ್ಪಣೆ ನಾಳೆ

ದೋರನಹಳ್ಳಿ: ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಮತ್ತು ಉಪ ತಹಸಿಲ್ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಕಳೆದ ಮೂರು ದಶಕದ ಕನಸು ಸೋಮವಾರ ನನಸಾಗುವ ಭಾಗ್ಯ ಕೂಡಿ ಬಂದಂತಾಗಿದೆ.

ದೋರನಹಳ್ಳಿ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ. ಈ ಗ್ರಾಮದಲ್ಲಿ ರೈತರು ಮತ್ತು ಕಾರ್ಮಿಕ ವರ್ಗದ ಜನರೆ ಹೆಚ್ಚಿದ್ದಾರೆ. ಈ ಹೋಬಳಿ ವ್ಯಾಪ್ತಿಗೆ ೨೩ ಹಳ್ಳಿ ಒಳಗೊಂಡಿವೆ. ರೈತರು ಪಹಣಿ, ಭೂ ಹಿಡುವಳಿ, ಸಣ್ಣ, ಅತಿ ಸಣ್ಣ ರೈತ, ಜಾತಿ ಆದಾಯ, ವಿಧವಾ ವೇತನ, ಅಂಗವಿಕಲ ವೇತನ ಹೀಗೆ ಹತ್ತು ಹಲವು ಕೆಲಸಕ್ಕಾಗಿ ಪರದಾಡುವಂತ ಸ್ಥಿತಿ ಇತ್ತು.

ಮೂವತ್ತು ವರ್ಷಗಳಿಂದ ಆಗಾಗ ಸ್ಥಳಾಂತರವಾಗುತ್ತಲೇ ಇದ್ದ ಈ ಕಚೇರಿಗಳು ಇನ್ಮುಂದೆ ತನ್ನದೆಯಾದ ಸ್ವಂತ ಕಟ್ಟಡ ಹೊಂದಿದ್ದರಿAದ ಈ ಎಲ್ಲ ಸಮಸ್ಯೆಗಳಿಗೆ ತೆರೆಕಾಣಲಿದೆ. ಈ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿತ್ತು. ಆದರೆ ಸೋಮವಾರ ನಾಡ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆಗೊಳ್ಳುವುದರೊಂಗಿದೆ ಜನರ ಸೇವೆಗೆ ಮುಂದಾಗಲಿದೆ.

ಈ ಕುರಿತು ವಿಜಯವಾಣಿ ೨೦೧೮ ಸೆ.೩ರಂದು ಸರ್ಕಾರಿ `ಕಚೇರಿಗಳಿಗಿಲ್ಲ ಸ್ವಂತ ಕಟ್ಟಡ' ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು. ಅಂದಿನ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ್ ೨೦೨೨ ಆ.೧೨ರಂದು ೬೦ ಲಕ್ಷ ರೂ. ವೆಚ್ಚದ ನಾಡ ಕಚೇರಿಗೆ ಅಡಿಗಲ್ಲು ಹಾಕಿದ್ದರು. ಈಗ ಕಾಮಗಾರಿ ಪೂರ್ಣಗೊಂಡು ಸುಸಜ್ಜಿತವಾದ ಕಟ್ಟಡ ಲೋಕಾರ್ಪಣೆಗೊಳ್ಳುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ.

ನಮ್ಮ ಗ್ರಾಮಕ್ಕೆ ಉಪ ತಹಸಿಲ್ ಕಚೇರಿಗೆ ಸ್ವಂತ ಕಟ್ಟಡ ಇರಲಿಲ್ಲ. ವಿಜಯವಾಣಿ ವರದಿಯಿಂದ ಹಿಂದಿನ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ವಿಶೇಷ ಕಾಳಜಿ ವಹಿಸಿದ್ದರಿಂದ ಅದ್ಭುತ ಕಚೇರಿ ನಿರ್ಮಾಣವಗಿದೆ.
| ಮಂಜುನಾಥ ಕಂಚಗಾರ ಗ್ರಾಪಂ ಸದಸ್ಯ ದೋರನಹಳ್ಳಿ

ದೋರನಹಳ್ಳಿ ಉಪತಹಸೀಲ್ದಾರ್ ನೂತನ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದ್ದು. ಸೋಮವಾರ ಉದ್ಘಾಟನೆಗೊಳ್ಳುವುದರಿಂದ ಸಕಾಲಕ್ಕೆ ಸಾರ್ವಜನಿಕರ ಕೆಲಸ-ಕಾರ್ಯಗಳಾಗಲಿವೆ.
| ಉಮಾಕಾಂತ ಹಳ್ಳೆ ತಹಸೀಲ್ದಾರ್ ಶಹಾಪುರ

ದೋರನಹಳ್ಳಿಯಲ್ಲಿ ಉಪತಹಸಿಲ್ ಕಚೇರಿ ಇಲ್ಲ ಎಂಬುದನ್ನು ವಿಜಯವಾಣಿ ವರದಿಯನ್ನು ನೋಡಿ ಗ್ರಾಮಕ್ಕೆ ಭೇಟಿ ನೀಡಿ ಅದರಂತೆ ಅನುದಾನ ಒದಗಿಸಿದ್ದೇನೆ. ಸೋಮವಾರ ಉದ್ಘಾಟನೆಯಾಗುತ್ತಿರುವುದು ಖುಷಿ ತಂದಿದೆ.
| ವೆಂಕಟರಡ್ಡಿಗೌಡ ಮುದ್ನಾಳ್ ಮಾಜಿ ಶಾಸಕ ಯಾದಗಿರಿ