ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ವಾಣಿವಿಲಾಸ ಸಾಗರ ಹಾಗೂ ಸೂಳೆಕೆರೆ ನೀರನ್ನು ಶುದ್ದೀಕರಿಸಿದ ಬಳಿಕವೇ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದರು.
ಡಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಹೀಗಾಗಿ ಯಾವುದೇ ವದಂತಿಗಳನ್ನು ಸಾರ್ವಜನಿಕರು ನಂಬಬಾರದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಆದರೂ ಕುದಿಸಿ, ಆರಿಸಿದ ನೀರನ್ನು ಬಳಸಬೇಕು. ಇದರಿಂದ ಬ್ಯಾಕ್ಟೀರಿಯಾಗಳಿದ್ದರೆ ನಾಶವಾಗಿ, ನೀರು ಶುದ್ಧವಾಗುತ್ತದೆ. ರೋಗ ರುಜಿನ ಹರಡುವುದಿಲ್ಲ ಎಂದು ಸಲಹೆ ನೀಡಿದರು.